ಕನ್ನಡ ಸಾಹಿತ್ಯದ ಅಂಶಗಳು ಭಾಗ -1



ಮಾನವನ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹಾಡಿದವರು  ಪುರಂದರದಾಸರು. 

ಯಮಳ ಪ್ರಶ್ನೆ  ಎಂಬುದು  ಪೂರ್ಣಚಂದ್ರ ತೇಜಸ್ವಿ ಅವರ ಕೃತಿ.

ಯಮನ ಸೋಲು ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಕೃತಿಯಾಗಿದೆ.

ಮಾತೆಂಬುದು ಜ್ಯೋತಿರ್ಲಿಂಗ ಎಂದು ನುಡಿದವರು ಅಲ್ಲಮಪ್ರಭುಗಳು, ಇವರ ಅಂಕಿತ ನಾಮ ಗುಹೇಶ್ವರ.

 ತ್ರಿಷಷ್ಠಿ ಲಕ್ಷಣ ಮಹಾಪುರಾಣದ ಇನ್ನೊಂದು ಹೆಸರೆಂದರೆ ಚಾವುಂಡರಾಯಪುರಾಣ, ಗಂಗರ ಮಂತ್ರಿ ಚಾವುಂಡರಾಯನೂ  ಬರೆದಿರುವರು ಕೃತಿಯಾಗಿದೆ.

ಧಾರವಾಡವು ಧಾರಾನಗರಿ ಎಂದೇ ಪ್ರಸಿದ್ಧಿ ಪಡೆದಿದೆ.

ಹುಚ್ಚು ಮನಸ್ಸಿನ ಹತ್ತು ಮುಖಗಳು ಎನ್ನುವುದು  ಶಿವರಾಮ ಕಾರಂತರ  ಆತ್ಮಕಥೆಯಾಗಿದೆ.

ಪ ಗು ಹಳಕಟ್ಟಿಯವರನ್ನ ವಚನ ಪಿತಾಮಹರು ಎಂದು ಕರೆಯುತ್ತಾರೆ.

ಶ್ರೀ ಪಾದರಾಯರ ಅಂಕಿತ ನಾಮವು ರಂಗ ವಿಠಲ ಎನ್ನುವುದಾಗಿದೆ.

ಕನ್ನಡದ ಮೊದಲ ಮಕ್ಕಳ ವಿಶ್ವಕೋಶ ಬಾಲ ಪ್ರಪಂಚ ವನ್ನು ಬರೆದವರು  ಶಿವರಾಮ್ ಕಾರಂತರು . 
ಕಿರಗೂರಿನ ಗಯ್ಯಾಳಿಗಳು ಎನ್ನುವ ಕಥೆಯನ್ನು ಬರೆದವರು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು.

ಕರ್ನಾಟಕದ ರಾಜ್ಯ ಭಾಷೆಯಾದ ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿದ ವರ್ಷ 2008.

ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಸಿಕೊಂಡವರು  ಗೋವಿಂದ ಪೈ. ನಂತರದಲ್ಲಿ  ಎರಡನೇ ರಾಷ್ಟ್ರಕವಿಯಾಗಿ  ಕುವೆಂಪು ಮತ್ತು  ಮೂರನೇ ರಾಷ್ಟ್ರಕವಿಯಾಗಿ  ಜಿಎಸ್ ಶಿವರುದ್ರಪ್ಪ ಅವರನ್ನು ಸೇರಿ ಕರ್ನಾಟಕದಲ್ಲಿ ಮೂರು ಜನ ರಾಷ್ಟ್ರಕವಿ ಗಳನ್ನು ಹೊಂದಿದ್ದೇವೆ. 

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದ  ಸ್ಥಳ ರಾಯಚೂರು ಆಗಿದೆ, 
   83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳವು ಮೈಸೂರು ಆಗಿದೆ. 
   84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳವು ಧಾರವಾಡ ಆಗಿದೆ. 
   85ನೇ ಅಖಿಲ ಭಾರತ ಕನ್ನಡ  ಸಾಹಿತ್ಯ ಸಮ್ಮೇಳನವು ನಡೆದ ಸ್ಥಳ ಕಲಬುರಗಿ ಆಗಿದೆ. 

ಎಚ್ ಎಲ್ ನಾಗೇಗೌಡರು ಸ್ಥಾಪಿಸಿರುವ  ಜನಪದಲೋಕ ಎನ್ನುವ ಸಂಸ್ಥೆ  ಮೈಸೂರಲ್ಲಿದೆ.

ಮುಂಡಿಗೆಗಳು  ಎನ್ನುವ ಸಾಹಿತ್ಯ ಶೈಲಿ ಬರೆದ ಕವಿಗಳು  ಕನಕದಾಸರು. 

ಇಜ್ಜೋಡು ಕೃತಿಯನ್ನು ಬರೆದವರು ವಿನಾಯಕ ಕೃಷ್ಣ  ಗೋಕಾಕ್ ರವರು.

ಭಾರತೀಯ ಸಿಂಧುರಶ್ಮಿ ಎನ್ನುವ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ಮತ್ತು  ಜ್ಞಾನಪೀಠ ಪ್ರಶಸ್ತಿ ಎರೆಡು ಲಭಿಸಿವೆ. 

ಕನ್ನಡದ ಪ್ರಸಿದ್ಧ ಜನಪದ ಕಥೆ, ಕಾವ್ಯವಾದ ಪುಣ್ಯಕೋಟಿಯ ಕಥೆಯಲ್ಲಿ ಬರುವ ಹುಲಿಯ ಹೆಸರು ಅರ್ಬುದ.

ಶ್ರೇಷ್ಠ ಸಾಹಿತಿಗಳು ಎಂದು ಹೆಸರು ಪಡೆದಿರುವ ಕನ್ನಡದ ತಂದೆ-ಮಗನ ಜೋಡಿ ಡಿ ವಿ ಗುಂಡಪ್ಪ ಮತ್ತು ಬಿಜಿಎಲ್ ಸ್ವಾಮಿ.

ಪ್ರಾಚೀನ ಕಾಲದಲ್ಲಿ ಕನ್ನಡನಾಡು ಕಾವೇರಿಯಿಂದ ಹಿಡಿದು ಗೋದಾವರಿ ನದಿಯ ತನಕ ಎಂದು ಪ್ರಸಿದ್ಧಿಯಾಗಿತ್ತು.

ದ ರಾ ಬೇಂದ್ರೆಯವರ ಅರಳು ಮರಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಮತ್ತು  ನಾಕುತಂತಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಮರಳಿ ಮಣ್ಣಿಗೆ ಎಂಬ ಕೃತಿಯನ್ನು ಶಿವರಾಮಕಾರಂತರು ರಚಿಸಿರುವವರು. ಇವರ ಮೂಕಜ್ಜಿ ಕನಸುಗಳು ಕೃತಿಗೆ  ಜ್ಞಾನಪೀಠ ಹಾಗೂ ಯಕ್ಷಗಾನ-ಬಯಲಾಟ ಕ್ಕೆ  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಕನ್ನಡದ ಆದಿ ಕವಿ ಎಂದೇ ಪ್ರಸಿದ್ಧಿಯಾಗಿರುವ ಕವಿ ಪಂಪ. ಇವನ ಕೃತಿಯಾದ ವಿಕ್ರಮಾರ್ಜುನ ವಿಜಯ ಚಂಪುಕಾವ್ಯ ವಾಗಿದೆ.

ಪಂಪನಿಗೆ ಆಶ್ರಯ ನೀಡಿದ ರಾಜ ಅರಿಕೇಸರಿ.

ಕನ್ನಡದ ರತ್ನತ್ರೇಯರು ಪಂಪ ಪೊನ್ನ ರನ್ನ.

ಕನ್ನಡ ಕವಿ ಚಕ್ರವರ್ತಿಗಳು ರನ್ನ ಪೊನ್ನ ಜನ್ನ.

ಕುವೆಂಪುರವರು ಮಹಾಛಂದಸ್ಸಿನ ಲ್ಲಿ ರಚಿಸಿರುವ ಕೃತಿ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ಕನ್ನಡ ಸಾಹಿತ್ಯದಲ್ಲಿ ಶೃಂಗಾರ ಕವಿ ಎಂದೇ ರತ್ನಾಕರವರ್ಣಿ ಯವರನ್ನು ಕರೆಯುವರು,  ಇವರು ಸಾಂಗತ್ಯದಲ್ಲಿ ಭರತೇಶ ವೈಭವವನ್ನು ರಚಿಸಿರುವವರು.

ನಮ್ಮ ಸಾಹಿತ್ಯದಲ್ಲಿ ನಿತ್ಯೋತ್ಸವದ ಕವಿ ಎಂದೇ ಪ್ರಸಿದ್ಧಿ ಪಡೆದಿರುವ ಕವಿ ಕೆ ಎಸ್ ನಿಸಾರ್ ಅಹಮದ್ ರವರು. ಇವರ ಕೃತಿ ಸಂಜೆ ಐದರ ಮಳೆ. 

ಗದುಗಿನ ನಾರಾಯಣಪ್ಪ ಕಾವ್ಯ ನಾಮ ಕುಮಾರವ್ಯಾಸ ಇವನನ್ನು ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆಯುತ್ತಾರೆ. ಭಾಮಿನಿ ಷಟ್ಪದಿಯಲ್ಲಿ ಗದಗಿನ ಭಾರತವನ್ನು ರಚಿಸಿರುವನು.

ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಕುವೆಂಪುರವರ ಹೇಳಿರುವರು.

ಅಭಿನವ ಪಂಪನೆಂದು ಖ್ಯಾತನಾದ ಕವಿ ನಾಗಚಂದ್ರ ಕೃತಿ ರಾಮಚಂದ್ರಚರಿತಪುರಾಣ.


ಚಿಕ್ಕವೀರರಾಜೇಂದ್ರ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ. ಇದರ ಕರ್ತೃ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಇವರ ಕಾವ್ಯನಾಮ ಶ್ರೀನಿವಾಸ ಆಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅಪ್ಪ ಮಗನ ಜೋಡಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿ.

ಸಂಚಿ ಹೊನ್ನಮ್ಮ ರಚಿಸಿದ ಹದಿಬದಿಯ ಧರ್ಮ ಸಾಂಗತ್ಯ ಕಾವ್ಯವಾಗಿದೆ ಇವಳು ಸಿಂಗಾರಾರ್ಯನ ಶಿಷ್ಯೆ  ಆಗಿದ್ದಾಳೆ.

ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಸಾರ  ಕನಕದಾಸರ ಕೃತಿಗಳು.

ಕಾಕನಕೋಟೆ, ತಾಳಿಕೋಟೆ ನಾಟಕದ ಕರ್ತೃ ಮಾಸ್ತಿಯವರು.

ಬಲ್ಲಿದರು ಇದ್ದು ಬಲವಿಲ್ಲ ಇದನ್ನು ಹೇಳಿದವರು ಸಂತ ಶಿಶುನಾಳ ಶರೀಫರು.

ಚೌಡಯ್ಯ ಸ್ಮಾರಕ ಭವನದ ಕಟ್ಟಡ ಪಿಟಿಲ್ ಆಕಾರದಲ್ಲಿದೆ.

ಅಶ್ವತ್ಥಾಮನ್ ನಾಟಕದ ಕರ್ತೃ ಬಿ ಎಂ ಶ್ರೀಕಂಠಯ್ಯ.

ಶಿಶು ಸಾಹಿತ್ಯವನ್ನು ರಚಿಸಿದವರು ಪಂಜೆಮಂಗೇಶರಾಯರು.

ಹಿಂದುಸ್ತಾನಿ ಸಂಗೀತದಲ್ಲಿ ಪ್ರಥಮ ಬಾರಿಗೆ ಭಾರತ ರತ್ನ ಪಡೆದವರು ಪಂಡಿತ್ ಭೀಮಸೇನ ಜೋಶಿ ಅವರು 2008.

ಕರ್ನಾಟಕ ಸಂಗೀತದಲ್ಲಿ ಭಾರತರತ್ನ ಪಡೆದ ಮಹಿಳೆ M S ಸುಬ್ಬಲಕ್ಷ್ಮಿ.

ಕನ್ನಡದ ಮೊಟ್ಟ ಮೊದಲ ತ್ರಿಪದಿ ರೂಪದಲ್ಲಿರುವ ಶಾಸನ ಬಾದಾಮಿಯ ಕಪ್ಪೆ ಅರಭಟ್ಟ ಶಾಸನವಾಗಿದೆ.

ಹಲ್ಮಿಡಿಶಾಸನ ಪೂರ್ವದ ಹಳೆಗನ್ನಡ ಭಾಷೆಯ ರೂಪದಲ್ಲಿದೆ ಇದು ಕದಂಬರ ವಂಶದ ಬಗ್ಗೆ ತಿಳಿಸುತ್ತದೆ.

ಕನ್ನಡದಲ್ಲಿ ಮೊಟ್ಟ ಮೊದಲ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದವರ ಎಸ್ ಎಲ್  ಭೈರಪ್ಪ. ಮಂದ್ರ ಕೃತಿಗೆ ಸಿಕ್ಕಿದೆ.

ಎಸ್ ಎಲ್ ಭೈರಪ್ಪನವರ ದಾಟು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ದೇವನೂರು ಮಹಾದೇವರ ಕುಸುಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.



ಕೃಷ್ಣ ನಾಯಕ್ ಸಿರಿಗೇರಿ...... 

Post a Comment

0 Comments