ಸಂವಿಧಾನದಲ್ಲಿ ಆಗಿರುವ ಪ್ರಮುಖ ತಿದ್ದುಪಡಿಗಳ ಹಿನ್ನೋಟ ಭಾಗ 1


1ನೇ ತಿದ್ದುಪಡಿ :- ನಮ್ಮ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಜೂನ್ 18 1951 ರಲ್ಲಿ ತಂದು 9ನೇ ಅನುಸೂಚಿ ಸೇರ್ಪಡೆ ಮಾಡಲಾಯಿತು. ಅನುಸೂಚಿಯು  ಭೂಸುಧಾರಣೆ ಗೆ  ಸಂಬಂಧಿಸಿದೆ. 

7ನೇ ತಿದ್ದುಪಡಿ :-  1956 ರಲ್ಲಿ ಸಂವಿಧಾನಕ್ಕೆ 7ನೇ ತಿದ್ದುಪಡಿ ಮಾಡುವುದರ ಮೂಲಕ ರಾಜ್ಯಗಳ ಪುನರ್ರಚನೆಯನ್ನು ಮಾಡಿ ನವಂಬರ್ 1 1956 ಜಾರಿಗೆ ತರಲಾಯಿತು. 

24ನೇ ತಿದ್ದುಪಡಿ :- 1971ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿಯು ರಾಷ್ಟ್ರಪತಿಗಳು ಸಂವಿಧಾನದ  ತಿದ್ದುಪಡಿಗೆ ತಮ್ಮ ಅನುಮತಿಯನ್ನು ನೀಡುವುದು ಕಡ್ಡಾಯ ಮಾಡಲಾಯಿತು. 

26 ನೇ ತಿದ್ದುಪಡಿ :- 1971ರಲ್ಲಿ ಜಾರಿಗೆ ತಂದ ಈ ತಿದ್ದುಪಡಿಯಲ್ಲಿ ಮಾಜಿ ರಾಜರಿಗೆ ರಾಜಧನ ಮತ್ತು ಸವಲತ್ತುಗಳನ್ನು ಕಡಿತಗೊಳಿಸಲಾಯಿತು. 

42 ನೇ ತಿದ್ದುಪಡಿ :- ನಮ್ಮ ಸಂವಿಧಾನದಲ್ಲಿ ಮಾಡಲಾಗಿರುವ ಅತಿದೊಡ್ಡ ತಿದ್ದುಪಡಿ ಕಾಯಿದೆಯಾಗಿದೆ. ಈ ತಿದ್ದುಪಡಿಯಲ್ಲಿ ಸರಿಸುಮಾರು 19ಕ್ಕೂ ಹೆಚ್ಚು ವಿಷಯಗಳನ್ನ ನಮ್ಮ ಸಂವಿಧಾನಕ್ಕೆ ಸೇರಿಸಲಾಗಿದೆ. ಆದ್ದರಿಂದ ಈ ತಿದ್ದುಪಡಿಗೆ ಮಿನಿ ಸಂವಿಧಾನ  ಎಂತಲೂ ಅಥವಾ ಇಂದಿರಾಗಾಂಧಿಯವರ ಅವಧಿಯಲ್ಲಿ ಆಗಿರುವುದರಿಂದ  ಇಂದಿರಾ ಸಂವಿಧಾನ ಎಂತಲೂ  ಕರೆಯುವರು. 1976ರಲ್ಲಿ ತಿದ್ದುಪಡಿ ತಂದು ಜನವರಿ 3,  1977 ರಲ್ಲಿ ಜಾರಿಗೆ ತರಲಾಯಿತು. ಈ ತಿದ್ದುಪಡಿ ಜಾರಿಗೆ ತರುವ ಸಂದರ್ಭದಲ್ಲಿ ಭಾರತದಲ್ಲಿ ಇಂದಿರಾಗಾಂಧಿಯವರು 1975 ಜೂನ್ 25 ರಿಂದ ಜಾರಿ ಮಾಡಿ ಮಾರ್ಚ್ 21 1977ರ ತನಕವೂ ತುರ್ತುಪರಿಸ್ಥಿತಿಯು  ಜಾರಿಯಲ್ಲಿತ್ತು. 



ಈ ತಿದ್ದುಪಡಿಗೆ ಸೇರಿಸಲಾದ ಪ್ರಮುಖ ವಿಷಯಗಳು. 

  • ಸ್ವರ್ಣಸಿಂಗ್ ಸಮಿತಿ ಶಿಫಾರಸು ಆಧಾರದ ಮೇಲೆ ನಮ್ಮ ಸಂವಿಧಾನಕ್ಕೆ 10 ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. 
  • ಸಂವಿಧಾನದ ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯತೀತ ಮತ್ತು ಐಕ್ಯತೆ ಎಂಬ ಮೂರು ಪದಗಳನ್ನು ಸೇರ್ಪಡೆ ಮಾಡಲಾಯಿತು. 
  • ಈ ತಿದ್ದುಪಡಿ ಮುಖಾಂತರ  ಮೂಲಭೂತ ಹಕ್ಕುಗಳಿಗೆ ನೀಡಿರುವ ಅಧಿಕಾರಕ್ಕಿಂತ ರಾಜ್ಯ ನಿರ್ದೇಶಕ ತತ್ವಗಳಿಗೆ  ಹೆಚ್ಚಿನ ಅಧಿಕಾರವನ್ನು ನೀಡಲಾಯಿತು. 
  • ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಹೆಚ್ಚಿಸಲಾಯಿತು. ಐದನೇ ಲೋಕಸಭೆಯ ಅವಧಿಯು  ಮಾತ್ರ ಆರು ವರ್ಷಗಳ ಅವಧಿಯನ್ನು ಹೊಂದಿರುತ್ತದೆ. 
  • ರಾಜ್ಯ ನಿರ್ದೇಶಕ ತತ್ವಗಳಿಗೆ  39A ವಿಧಿಯನ್ನು ಸೇರಿಸಿ ಉಚಿತ ಮತ್ತು ಕಾನೂನು ನೆರವನ್ನು  ಒದಗಿಸಲಾಯಿತು. 
  • ರಾಜ್ಯ ನಿರ್ದೇಶಕ ತತ್ವಗಳು ಗೆ 43A ವಿಧಿಯನ್ನು ಸೇರಿಸಿ ಕಾರ್ಮಿಕರು ಸಂಘ ಕಟ್ಟುವ ಮತ್ತು ಸಂಸ್ಥೆಗಳಲ್ಲಿ ಪಾಲ್ಗೊಳ್ಳುವಿಕೆಯ ಅಧಿಕಾರವನ್ನು ನೀಡಲಾಯಿತು. 
  • ರಾಜ್ಯ ನಿರ್ದೇಶಕ ತತ್ವಗಳ ಗೆ 48A ವಿಧಿಯನ್ನು ಸೇರಿಸಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಆದ್ಯತೆಯನ್ನು ನೀಡಲಾಯಿತು.
  • ಸಂವಿಧಾನದಲ್ಲಿ ಭಾಗ 14 ಸೇರಿಸುವುದರ ಮೂಲಕ ನ್ಯಾಯಾಧಿಕರಣಗಳ ಸ್ಥಾಪನೆಗೆ ಅವಕಾಶ ಮಾಡಲಾಯಿತು. ಇದರ ಅನ್ವಯ 323A ವಿಧಿ ಪ್ರಕಾರ ಕರ್ನಾಟಕ ಆಡಳಿತ ನ್ಯಾಯಾಧೀಕರಣ ಮತ್ತು 323D ವಿಧಿ ಗಳು ರಾಜ್ಯ ನ್ಯಾಯಧಿಕರಣಗಳು  ಸ್ಥಾಪನೆಯಾಗಿವೆ. 
  • ಈ  ತಿದ್ದುಪಡಿಯಲ್ಲಿ  ನ್ಯಾಯಿಕ ವಿಮರ್ಶೆಯನ್ನು ಮೊಟಗುಗೊಳಿಸಿ ಸಂಸತ್ತಿನ ಪಾರಮತ್ಯಯನ್ನು  ಎತ್ತಿಹಿಡಿಯಿತು. ಸಂಸತ್ತಿಗೆ  ಹೆಚ್ಚಿನ ಅಧಿಕಾರವನ್ನು ನೀಡಲಾಯಿತು. 
  • ಭಾರತದಲ್ಲಿ ಯಾವುದೇ ಭಾಗದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲು ರಾಷ್ಟ್ರಪತಿಗಳಿಗೆ  ಅನುಮತಿ ನೀಡಲಾಯಿತು. 
  • ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಆಡಳಿತದ ಅವಧಿಯನ್ನು 6 ತಿಂಗಳಿಂದ 1 ವರ್ಷದವರೆಗೆ ಹೆಚ್ಚಿಸಲಾಯಿತು. 
  • ರಾಜ್ಯ ಪಟ್ಟಿಯಲ್ಲಿರುವ ಐದು ವಿಷಯಗಳನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು. ಶಿಕ್ಷಣ, ಆರೋಗ್ಯ, ಅರಣ್ಯ ಮತ್ತು ವನ್ಯಜೀವಿ, ತೂಕ ಮತ್ತು ಅಳತೆ  ಈ ವಿಷಯಗಳನ್ನು ಸೇರಿಸಲಾಯಿತು.


ಕೃಷ್ಣ ನಾಯಕ್ ಸಿರಿಗೇರಿ...... 

Post a Comment

0 Comments