ಅರ್ಥಶಾಸ್ತ್ರ
ಪಂಚವಾರ್ಷಿಕ ಯೋಜನೆಗಳ ಕುರಿತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗಿರುವ Top 30 ಪ್ರಶ್ನೆ ಉತ್ತರಗಳ ಭಾಗ-1
![]() |
QUESTIONS WITH ANSWERS |
1. ಪಂಚವಾರ್ಷಿಕ ಯೋಜನೆಗಳನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು ಯಾರು?
ಉತ್ತರ :- ಜವಹರ್ ಲಾಲ್ ನೆಹರು
2. ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ಯಾವ ಕ್ಷೇತ್ರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಯಿತು.?
ಉತ್ತರ :- ಕೃಷಿ ಕ್ಷೇತ್ರಕ್ಕೆ
3. ಭಾರತದ ಪ್ರಥಮ ಪಂಚವಾರ್ಷಿಕ ಯೋಜನೆಯು ಯಾವ ಮಾದರಿಯನ್ನು ಆದರಿಸಿದೆ?
ಉತ್ತರ :- ಹೆರೋಡ್ ಡೋಮರ್ ಮಾದರಿ.
4. ಎರಡನೇ ಪಂಚವಾರ್ಷಿಕ ಯೋಜನೆಯ ರೂಪು ರೇಷವನ್ನು ಮಾಡಿದವರು ಯಾರು?
ಉತ್ತರ :- ಡಾಕ್ಟರ್ ಪಿ ಸಿ ಮಹಾಲ ನೋಬಿಸ್
5. ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಔದ್ಯೋಗಿಕ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು.?
ಉತ್ತರ :- ಎರಡನೇ ಪಂಚವಾರ್ಷಿಕ ಯೋಜನೆ.
6. ಭಾರತದಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದ ಪಂಚವಾರ್ಷಿಕ ಯೋಜನೆ ಯಾವುದು?
ಉತ್ತರ :- ಐದನೇ ಪಂಚವಾರ್ಷಿಕ ಯೋಜನೆ.1975ರಲ್ಲಿ 20 ಅಂಶಗಳ ಕಾರ್ಯಕ್ರಮವನ್ನು ಇಂದಿರಾಗಾಂಧಿಯವರ ಸರ್ಕಾರ ಘೋಷಣೆ ಮಾಡಿತು.
7. ಕಾಲಾನುಕ್ರಮದಲ್ಲಿ ಜೋಡಿಸಿ.
A) ಮಹಾಲನೋಬಿಸ್ ಮಾದರಿ.
B) ಯೋಜನಾ ರಜಾವಧಿ.
C) ಉರುಳುವ ಯೋಜನೆ.
ಉತ್ತರ : - a b c ಸರಿಯಾಗಿದೆ.
8. ಯಾವ ಪಂಚವಾರ್ಷಿಕ ಯೋಜನೆಯಲ್ಲಿ EXIM ಬ್ಯಾಂಕ್ ಅನ್ನು ಸ್ಥಾಪನೆ ಮಾಡಲಾಯಿತು?
ಉತ್ತರ :- ಆರನೇ ಪಂಚವಾರ್ಷಿಕ ಯೋಜನೆಯಲ್ಲಿ.1982 ಜನವರಿ 1 ರಂದು EXIM ಬ್ಯಾಂಕ್ ಸ್ಥಾಪನೆ ಮಾಡಲಾಯಿತು.
9. ನಬಾರ್ಡ್ (NABARD) ಬ್ಯಾಂಕ್ ಯಾವ ಶಿಫಾರಸ್ಸಿನ ಮೇರೆಗೆ ಸ್ಥಾಪನೆ ಮಾಡಲಾಯಿತು.?
ಉತ್ತರ :- ಶಿವರಾಮನ್ ಸಮಿತಿ ಶಿಫಾರಸ್ಸಿನ ಆದಾರದ ಮೇಲೆ 1982 ಏಪ್ರಿಲ್ 15 ರಂದು ಆರನೇ ಪಂಚ ವಾರ್ಷಿಕ ಯೋಜನೆಯಲ್ಲಿ ಸ್ಥಾಪನೆ ಮಾಡಲಾಯಿತು.
10. ಜವಾಹರ್ ರೋಜ್ ಗಾರ್ ಯೋಜನೆ (JRY) ಉದ್ದೇಶ ಏನು?
ಉತ್ತರ :- ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು.
11. ಯಾವ ಪಂಚ ವಾರ್ಷಿಕ ಯೋಜನೆಯಲ್ಲಿ MGNREGA ಯೋಜನೆಯನ್ನು ಜಾರಿಗೆ ತರಲಾಯಿತು?
ಉತ್ತರ :- ಹತ್ತನೇ ಪಂಚವಾರ್ಷಿಕ ಯೋಜನೆ 2002 ರಿಂದ 2007 ರ ಅವಧಿ.
12. ಹತ್ತನೇ ಪಂಚವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ಆದಾಯದ ಬೆಳವಣಿಗೆ ದರದ ಗುರಿ?
ಉತ್ತರ :- ಶೇ 8 ರಷ್ಟು
13. ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಉದ್ದೇಶವೇನು?
ಉತ್ತರ :- ತ್ರಿವತಾರವಾದ ಸುಸ್ಥಿರ ಹಾಗೂ ಎಲ್ಲರನೊಳಗೊಂಡ ಆರ್ಥಿಕ ಬೆಳವಣಿಗೆ.
14. ನೀತಿ ಆಯೋಗವನ್ನು ಏನೆಂದು ಕರೆಯುವವರು?
ಉತ್ತರ :- ಶ್ರೇಷ್ಠ ಚಿಂತಕರ ಚಾವಡಿ.
15. NITI ಪದದ ಅರ್ಥ ಬರೆಯಿರಿ.
ಉತ್ತರ :- National Institutions For Transforming India.NITI
16. ಪಂಚವಾರ್ಷಿಕ ಯೋಜನೆಗಳಿಗೆ ಕೊನೇದಾಗಿ ಅನುಮೋದನೆ ನೀಡುವವರು ಯಾರು?
ಉತ್ತರ :- ರಾಷ್ಟ್ರೀಯ ಅಭಿರುದ್ದಿ ಮಂಡಳಿ (National Development Council).
17. ಮೊದಲನೇ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ ಯಾವುದು?
ಉತ್ತರ :- ಪ್ರಥಮ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ 1951 ರಲ್ಲಿ.
18. ಗರೀಬಿ ಹಟಾವೋ ಎಂಬುದು ಯಾವ ಪಂಚವಾರ್ಷಿಕ ಯೋಜನೆಯ ಘೋಷಣೆಯಾಗಿದೆ?
ಉತ್ತರ :- ಐದನೇ ಪಂಚ ವಾರ್ಷಿಕ ಯೋಜನೆಯ ಘೋಷಣೆಯಾಗಿದೆ.
19. ಯಾವ ಪಂಚ ವಾರ್ಷಿಕ ಯೋಜನೆಯು ಮಿಶ್ರ ಆರ್ಥಿಕತೆಯನ್ನು ಒಳಗೊಂಡಿತ್ತು?
ಉತ್ತರ :- ಎರಡನೇ ಪಂಚವಾರ್ಷಿಕ ಯೋಜನೆ. ಮಿಶ್ರ ಆರ್ಥಿಕತೆ ಎಂದರೆ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆ ಆಗಿದೆ.
20. ಯಾವ ಪಂಚವಾರ್ಷಿಕ ಯೋಜನೆ ನಂತರ ರಜಾವಧಿಯನ್ನು ಘೋಷಿಸಲಾಯಿತು?
ಉತ್ತರ :- ಮೂರನೇ ಪಂಚವಾರ್ಷಿಕ ಯೋಜನೆ ನಂತರ 1966 ರಿಂದ 1969 ರ ತನಕ ಯೋಜನಾ ರಜಾವಧಿಯನ್ನು ಘೋಷಣೆ ಮಾಡಲಾಗಿತ್ತು.
21. ಜವಾಹರ್ ರೋಜಗಾರ್ ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಘೋಷಣೆ ಮಾಡಲಾಗಿತ್ತು?
ಉತ್ತರ :- ಏಳನೇ ಪಂಚವಾರ್ಷಿಕ ಯೋಜನೆಯಲ್ಲಿ ಏಪ್ರಿಲ್ 01, 1989 ರಲ್ಲಿ ಘೋಷಣೆ ಮಾಡಲಾಯಿತು.
23. ರಾಷ್ಟ್ರೀಯ ಅಭಿರುದ್ದಿ ಮಂಡಳಿ (NDC) ಯಾರು ಯಾರನ್ನು ಒಳಗೊಂಡಿರುತ್ತದೆ. )
ಉತ್ತರ :- ಪ್ರಧಾನ್ ಮಂತ್ರಿ, ಪದ ನಿಮಿಕ್ತ ಅಧ್ಯಕ್ಷರು. ಕೇಂದ್ರ ಕ್ಯಾಬಿನೆಟ್ ಸಚಿವರುಗಳು, ಎಲ್ಲ ರಾಜ್ಯಗಳ ಮುಖ್ಯ ಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಅಧಿಕಾರಿಗಳು.
24. ಭಾರತದಲ್ಲಿ ಕನಿಷ್ಠ ಅಗತ್ಯಗಳು ಮತ್ತು ನಿರ್ದೇಶಿತ ಬಡತನ ವಿರೋಧಿ ಕಾರ್ಯಕ್ರಮಗಳು ಎಂಬ ಪರಿಕಲ್ಪನೆಯನ್ನು ಹೊಂದಿದ ಪಂಚವಾರ್ಷಿಕ ಯೋಜನೆ ಯಾವುದು?
ಉತ್ತರ :- ಐದನೇ ಪಂಚ ವಾರ್ಷಿಕ ಯೋಜನೆ.
25. ಯಾವ ವರ್ಷದಲ್ಲಿ ಭಾರತದ ಯೋಜನಾ ಆಯೋಗವನ್ನು ಸ್ಥಾಪನೆ ಮಾಡಲಾಯಿತು?
ಉತ್ತರ :- 1950
26. LPG ಮಾದರಿಯನ್ನು 1991 ರಲ್ಲಿ ಪರಿಚಯಿಸಿದಾಗ ಕೇಂದ್ರದಲ್ಲಿ ಆರ್ಥಿಕ ಸಚಿವರು ಆಗಿದ್ದವರು ಯಾರು?
ಉತ್ತರ :- ಡಾಕ್ಟರ್ ಮನಮೋಹನ್ ಸಿಂಗ್.
27. ವೇಗವಾಗಿ ಮತ್ತು ಹೆಚ್ಚು ಅಂತರ್ಗತ ಬೆಳವಣಿಗೆ ದರ ಎಂಬುದು ಯಾವ ಪಂಚವಾರ್ಷಿಕ ಯೋಜನೆಯ ಉದ್ದೇಶವಾಗಿತ್ತು.?
ಉತ್ತರ :- ಹನ್ನೊಂದನೇ ಪಂಚ ವಾರ್ಷಿಕ ಯೋಜನೆ.
28. ಸಾರ್ವಜನಿಕ ವಲಯಕ್ಕೆ ಹೋಲಿಸಿದರೆ ಮೊದಲ ಬಾರಿಗೆ ಖಾಸಗಿ ವಲಯಕ್ಕೆ ಹೆಚ್ಚು ಆದ್ಯತೆ ನೀಡಿದ ಯೋಜನೆ ಯಾವುದು?
ಉತ್ತರ :- ಏಳನೇ ಪಂಚ ವಾರ್ಷಿಕ ಯೋಜನೆ.
29. ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಿಗೆ ಬೆಳವಣಿಗೆ ಎಂಬುದು ಯಾವ ಪಂಚವಾರ್ಷಿಕ ಯೋಜನೆಯ ಉದ್ದೇಶವಾಗಿತ್ತು?
ಉತ್ತರ :- ಒಂಬತ್ತನೇ ಪಂಚವಾರ್ಷಿಕ ಯೋಜನೆ.
30. ಆರ್ಥಿಕ ಸುಧಾರಣೆಗಳನ್ನು ನರಸಿಂಹ ರಾವ್ ಅವರ ಸರಕಾರವು ಯಾವ ಪಂಚ ವಾರ್ಷಿಕ ಯೋಜನೆಯಡಿಯಲ್ಲಿ ಜಾರಿಗೆ ತರಲಾಗಿತ್ತು?
ಉತ್ತರ :- ಎಂಟನೇ ಪಂಚವಾರ್ಷಿಕ ಯೋಜನೆ 1992 ರಿಂದ 1997 ರ ಅವಧಿಯಲ್ಲಿ.
ಕೃಷ್ಣ ನಾಯಕ್ ಸಿರಿಗೇರಿ....
Post a Comment
0 Comments
Happy Friendship Day...... My Dear Friends.. !