ಭಾರತದ ಪಂಚವಾರ್ಷಿಕ ಯೋಜನೆಗಳು ಭಾಗ-2




ಆರನೇ ಪಂಚವಾರ್ಷಿಕ ಯೋಜನೆ :- 1980 ರಿಂದ 1985.


  • ಆರನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1980 ರಿಂದ ಮಾರ್ಚ್ 31, 1985 ರವರೆಗೆ. 
  • ಆರನೇ ಪಂಚವಾರ್ಷಿಕ ಯೋಜನೆಯನ್ನು ಮೊರಾರ್ಜಿ ದೇಸಾಯಿಯವರ ಜನತಾ ಸರ್ಕಾರವು ಜಾರಿಗೆ ತರಲಾಯಿತು. ನಂತರದಲ್ಲಿ ಬಂದ ಕಾಂಗ್ರೆಸ್ ಸರ್ಕಾರದ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ಈ  ಯೋಜನೆಯನ್ನು ರದ್ದುಪಡಿಸಿ ಹೊಸ ಯೋಜನೆಯನ್ನು ಜಾರಿಗೆ ತಂದರು. 

ಆರನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 


1. ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಗೆ ಹೆಚ್ಚಿನ ಆಧ್ಯತೆ.


2. ಆಧುನಿಕರಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಯಿತು.

3. ಸಂಪನ್ಮೂಲಗಳ ಉತ್ತಮ ಬಳಕೆಯಿಂದ ರಾಷ್ಟ್ರೀಯ ಉತ್ಪನ್ನದಲ್ಲಿ ಹೆಚ್ಚಳ ಮಾಡುವುದು.

4. ರಾಷ್ಟ್ರೀಯ ವರಮಾನವನ್ನು ಶೇಕಡಾ 5.2 ಹೆಚ್ಚಿಸುವುದು.

 ಆರನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು.

1. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮವನ್ನು 1980 ರಲ್ಲಿ ಜಾರಿ ಮಾಡಲಾಯಿತು. NREP

2. ಏಪ್ರಿಲ್ 15, 1980 ರಲ್ಲಿ ಇಂದಿರಾಗಾಂಧಿಯವರ ನೇತೃತ್ವದ ಸರ್ಕಾರ ಆರು ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು.

3. ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮವನ್ನು 1980 ರಲ್ಲಿ ಜಾರಿಗೆ ಮಾಡಲಾಯಿತು.

4. ಜನವರಿ 01, 1982 ರಲ್ಲಿ  EXIM ಬ್ಯಾಂಕ್ ಸ್ಥಾಪನೆ. Export and Import ಬ್ಯಾಂಕ್.

5. ಶಿವರಾಮನ್ ಸಮಿತಿ ಶಿಫಾರಸು ಆಧಾರದ ಮೇಲೆ ಜುಲೈ 12, 1982 ರಲ್ಲಿ ನಬಾರ್ಡ್ ಬ್ಯಾಂಕ್ ಸ್ಥಾಪನೆ ಮಾಡಲಾಯಿತು. NABARD :  ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್.

6. ಗುರಿಯಿಟ್ಟ ರಾಷ್ಟ್ರೀಯ ಆದಾಯ ಬೆಳವಣಿಗೆ ದರ ಶೇ 5.2 ರಷ್ಟು.  ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 5.7 ರಷ್ಟು.


ಏಳನೇ ಪಂಚವಾರ್ಷಿಕ ಯೋಜನೆ. :- 1985 ರಿಂದ 1990.

  • ಏಳನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1985 ರಿಂದ ಮಾರ್ಚ್ 31,  1990 ರವರೆಗೆ. 
  • ಆಧುನೀಕರಣ, ಸ್ವಾವಲಂಬನೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಬೆಳವಣಿಗೆ ಎಂಬ ನೀತಿಯೊಂದಿಗೆ ಜಾರಿ.
 ಏಳನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು.

1. ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವುದು.

2. ಸಾಂಪ್ರದಾಯಕವಲ್ಲದ ಇಂಧನದ ಮೂಲವನ್ನು ಹೆಚ್ಚಿಸುವುದು.

3. ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಮಾಡುವುದು.

 ಏಳನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು. 


1. ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986 ರಲ್ಲಿ ಜಾರಿಗೆ ತರಲಾಯಿತು.


2. ಭಾರತೀಯ ಷೇರು ಮಾರುಕಟ್ಟೆಯನ್ನು 1988 ರಲ್ಲಿ ಸ್ಥಾಪನೆ ಮಾಡಲಾಯಿತು. SEBI. 

3. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಜನರಿಗೆ ಸ್ವ ಉದ್ಯೋಗ ಕಲ್ಪಿಸುವ ಉದ್ದೇಶದಿಂದ,  ನೆಹರು ರೋಜ್ಗಾರ್ ಯೋಜನೆ (NRY) ಮತ್ತು ಜವಾಹರ ರೋಜ್ಗಾರ್ ಯೋಜನೆ (JRY) ಜಾರಿಗೆ ತರಲಾಯಿತು.

4. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ ಹಣಕಾಸಿನ ನೆರವು ಒದಗಿಸುವ ಸಲುವಾಗಿ SIDBI ಬ್ಯಾಂಕ್ ನ್ನು  ಸ್ಥಾಪನೆ ಮಾಡಲಾಯಿತು. (Small Industries Development Bank Of India)

5. ಗುರಿ ಇಟ್ಟ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 5 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ  6.1 ರಷ್ಟು.

6. 1990 ರಿಂದ  1992 ರ ತನಕ ವಾರ್ಷಿಕ ಯೋಜನೆಗಳನ್ನು ಘೋಷಿಸಲಾಯಿತು.


ಎಂಟನೇ ಪಂಚವಾರ್ಷಿಕ ಯೋಜನೆ :- 1992 ರಿಂದ 1997. 

  • ಎಂಟನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1992 ರಿಂದ ಮಾರ್ಚ್ 31,  1997 ರವರೆಗೆ.
  • ಮಾನವ ಸಂಪನ್ಮೂಲ ಅಭಿವೃದ್ಧಿ ಎಂಬ ಧ್ಯೇಯದೊಂದಿಗೆ ಜಾರಿ ಮಾಡಲಾಯಿತು. 
 ಎಂಟನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 


1. ಜನಸಂಖ್ಯೆ ನಿಯಂತ್ರಣ ಮಾಡುವುದು.


2. ಮೂಲಭೂತ ಸೌಕರ್ಯಗಳಾದ ಆರೋಗ್ಯ,  ಶಿಕ್ಷಣ, ಕುಡಿಯುವ ನೀರು, ರಸ್ತೆ ಮುಂತಾದವುಗಳನ್ನ ಒದಗಿಸುವುದು.

3. ಅನಕ್ಷರತೆಯ ಮಟ್ಟವನ್ನು ಕಡಿಮೆ ಮಾಡುವುದು.

4. ರಾಷ್ಟ್ರೀಯ ಆದಾಯದ ಬೆಳವಣಿಗೆ ದರವನ್ನು ಶೇ 5.6ಕ್ಕೆ  ಹೆಚ್ಚಿಸುವುದು.

 ಎಂಟನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು.

1. ಹೊಸ ಆರ್ಥಿಕ ನೀತಿಯನ್ನು ಘೋಷಿಸಲಾಯಿತು. LPG ಜಾರಿಗೆ ತರಲಾಯಿತು

2. ಉದ್ಯೋಗ ಭರವಸೆ ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ಮಹಾರಾಷ್ಟ್ರ ರಾಜ್ಯದಲ್ಲಿ  ತರಲಾಯಿತು (EAS:- Employement Assurance Scheme). 

3. ನಗರ ಪ್ರದೇಶದ ಬಡಜನರಿಗೆ ಸ್ವ ಉದ್ಯೋಗ ಕಲ್ಪಿಸುವ ಸ್ವರ್ಣಜಯಂತಿ ಶಹರಿ ರೋಜಗಾರ್ ಯೋಜನೆ ಜಾರಿಗೆ ತರಲಾಯಿತು.

4. ಜನವರಿ 01, 1995 ರಲ್ಲಿ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯತ್ವಕ್ಕೆ ಭಾರತ ಸಹಿ ಹಾಕುವುದರ ಮೂಲಕ WTO ನ ಸದಸ್ಯ ರಾಷ್ಟ್ರವಾಯಿತು.

5. ಮಾರುಕಟ್ಟೆಗಳ ಸುಧಾರಣೆ ಹಾಗೂ ಕೈಗಾರಿಕೆಗಳ ಆಧುನೀಕರಣ ಮಾಡಲಾಯಿತು.

6. ಗುರಿಯಿಟ್ಟ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 5.6ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 4.7 ರಷ್ಟು.


ಒಂಬತ್ತನೇ ಪಂಚವಾರ್ಷಿಕ ಯೋಜನೆ :- 1997 ರಿಂದ  2002.

  • ಒಂಬತ್ತನೇ ಪಂಚ ವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1997 ರಿಂದ ಮಾರ್ಚ್ 31, 2002 ರವರೆಗೆ. 
  • ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಬೆಳವಣಿಗೆ ಎಂಬ ಧ್ಯೇಯದೊಂದಿಗೆ ಜಾರಿ. 

ಒಂಬತ್ತನೇ  ಪಂಚವಾರ್ಷಿಕ ಯೋಜನೆ ಗುರಿ ಮತ್ತು ಉದ್ದೇಶಗಳು. 


1. ಕೃಷಿಯಲ್ಲಿ ಬದಲಾವಣೆಯಿಂದ ಜನರ ಜೀವನಮಟ್ಟ ಮತ್ತು ಬಡತನ ನಿರ್ಮೂಲನೆ ಮಾಡುವುದು.


2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ  ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು.

3. ಕಡು ಬಡವರಿಗೆ ಆಹಾರ ಭದ್ರತೆಯನ್ನು ನೀಡುವುದು.

4. ಬೆಲೆಗಳ ಏರಿಕೆ ನಿಯಂತ್ರಣ ಮಾಡಿ ಸ್ಥಿರತೆಯನ್ನು ಕಾಪಾಡುವುದು.

ಒಂಬತ್ತನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು. 


1. ಗಂಗಾ ಕಲ್ಯಾಣ ಯೋಜನೆ ಯನ್ನು 1997-98 ರಲ್ಲಿ ಜಾರಿಗೆ ತರಲಾಯಿತು.


2. ಅನ್ನಪೂರ್ಣ ಯೋಜನೆ ಮತ್ತು ಸ್ವರ್ಣಜಯಂತಿ ಗ್ರಾಮ ಸ್ವರೋಜಗಾರ್ ಯೋಜನೆಯನ್ನು 1999 ರಲ್ಲಿ ಜಾರಿಗೆ ತರಲಾಯಿತು. ಜನರ ಆದಾಯವನ್ನು ಹೆಚ್ಚಿಸುವ ಯೋಜನೆ.

3. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಡಿಸೆಂಬರ್ 25,  2000 ರಲ್ಲಿ ಜಾರಿಗೆ ತರಲಾಯಿತು.

4. ಅಂತ್ಯೋದಯ ಅನ್ನ ಯೋಜನೆ ಡಿಸೆಂಬರ್ 25 2000  ರಲ್ಲಿ ಜಾರಿ. ಆಹಾರ ಒದಗಿಸುವ ಯೋಜನೆ ಆಗಿದೆ.

5. ನಗರ ಪ್ರದೇಶದ ಕೊಳೆಗೇರಿ ನಿವಾಸಿಗಳಿಗೆ ವಸತಿ ಕಲ್ಪಿಸುವುದಕ್ಕಾಗಿ ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ ಯನ್ನು 2001ರಲ್ಲಿ ಜಾರಿ ಮಾಡಲಾಯಿತು.

6. ಗುರಿಯಿಟ್ಟ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 6.5 ರಷ್ಟು. ಸಾಧಿಸಿದಲ್ಲಿ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ 5.4 ರಷ್ಟು.


ಹತ್ತನೇ  ಪಂಚವಾರ್ಷಿಕ ಯೋಜನೆ :- 2002 ರಿಂದ  2007.

  • ಹತ್ತನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 2002 ರಿಂದ ಮಾರ್ಚ್ 31, 2007 ರವರೆಗೆ.  
  • ಸುಸ್ಥಿರ ಅಭಿರುದ್ದಿ ಅಥವಾ ಅವಿಶ್ರಾಂತ ಬೆಳವಣಿಗೆ ಎಂಬ ಉದ್ದೇಶದೊಂದಿಗೆ ಜಾರಿ. 


ಹತ್ತನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು.

1. ಸಾಕ್ಷರತೆಯ ಪ್ರಮಾಣವನ್ನು ಶೇಕಡ 75 ಕ್ಕೆ  ಹೆಚ್ಚಿಸುವುದು.

2. 2003 ರೊಳಗೆ ಕಡ್ಡಾಯವಾಗಿ ಎಲ್ಲ ಮಕ್ಕಳನ್ನು ಶಾಲೆಗೆ ದಾಖಲುಗೊಳಿಸುವುದು.

3. ಅರಣ್ಯ ಪ್ರದೇಶವನ್ನು  2007 ಕ್ಕೆ  ಶೇ  25 ಮತ್ತು 2012 ರೊಳಗಾಗಿ ಶೇ 33 ಕ್ಕೆ ಹೆಚ್ಚಿಸುವುದು.

4. ಶಿಶು ಮರಣ ದರ ಮತ್ತು ಮಾತೃ ಮರಣ ದರವನ್ನು ಕಡಿಮೆ ಮಾಡುವುದು.

5. ಜನಸಂಖ್ಯಾ ಬೆಳವಣಿಗೆ ದರವನ್ನು 2001 ಮತ್ತು  2011 ರ ಜನಗಣತಿ ನಡುವೆ ಶೇ 16.2 ಕ್ಕೆ ಇಳಿಸುವುದು.

 ಹತ್ತನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು. 


1. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿ. MGNREGA 


2. ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು 2004 ರಲ್ಲಿ ತರಲಾಯಿತು.

3. ನೀರಾವರಿ, ಕುಡಿಯುವ ನೀರು, ವಸತಿ, ರಸ್ತೆ, ದೂರವಾಣಿ ಮತ್ತು ವಿದ್ಯುತ್ ಸೌಲಭ್ಯಗಳು ಗ್ರಾಮೀಣ ಪ್ರದೇಶಕ್ಕೆ ಒದಗಿಸುವುದರ ಸಲುವಾಗಿ ಭಾರತ್ ನಿರ್ಮಾಣ ಎಂಬ ಯೋಜನೆಯನ್ನು 2005ರಲ್ಲಿ ಜಾರಿಗೆ ತರಲಾಯಿತು.

4. ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಸೌಲಭ್ಯ ಸಲುವಾಗಿ 2005 ರಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆ ಜಾರಿಗೆ ತರಲಾಯಿತು.NRHM

5. ಗುರಿಯಿಟ್ಟ ರಾಷ್ಟ್ರೀಯ ಆದಾಯದ  ಬೆಳವಣಿಗೆ ದರ ಶೇ 8 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 7.2 ರಷ್ಟು.


ಹನ್ನೊಂದನೇ ಪಂಚವಾರ್ಷಿಕ ಯೋಜನೆ : - 2007 ರಿಂದ 2012.

  • ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 2007 ರಿಂದ  ಮಾರ್ಚ್ 31, 2012 ರವರೆಗೆ. 
  • ತ್ವರಿತ ಮತ್ತು ಎಲ್ಲರನ್ನೊಳಗೊಂಡ ಆರ್ಥಿಕ ಬೆಳವಣಿಗೆ ಎಂಬ ಉದ್ದೇಶದೊಂದಿಗೆ ಜಾರಿ. 

ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 


1. ನಿರುದ್ಯೋಗದ ಪ್ರಮಾಣವನ್ನು ಶೇ 5 ಕ್ಕೆ  ಕಡಿಮೆ ಮಾಡುವುದು.


2. ಸಾರ್ವಜನಿಕ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇ 2 ರಷ್ಟು ಏರಿಸುವುದು.

3. ಸಾಕ್ಷರತೆಯ ಪ್ರಮಾಣವನ್ನು ಶೇಕಡ 85 ಹೆಚ್ಚಿಸುವುದು.

4. ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಶೇ 20 ಕ್ಕೆ ತರುವುದು.

5. ರಾಷ್ಟ್ರೀಯ ಆದಾಯದ ವಾರ್ಷಿಕ ಬೆಳವಣಿಗೆ ದರವನ್ನು ಶೇ 9 ಕ್ಕೆ  ಹೆಚ್ಚಿಸುವುದು.


 ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ಸಾಧನೆಗಳು. 



1. ಸಾಕ್ಷರ ಭಾರತ ಎಂಬ ಕಾರ್ಯಕ್ರಮವನ್ನು  2009 ರಲ್ಲಿ ಜಾರಿ ಮಾಡಲಾಯಿತು.


2. ಕೊಳಗೇರಿ ನಿವಾಸಿಗಳಿಗೆ ಆಸ್ತಿ ಹಕ್ಕು ಪತ್ರ ವಿತರಿಸುವುದು ಮತ್ತು ನಗರ ಪ್ರದೇಶದ ಕೊಳಚೆ ನಿರ್ಮೂಲನೆ ಮಾಡುವುದರ  ಸಲುವಾಗಿ ರಾಜೀವ್ ಆವಾಸ್ ಯೋಜನೆ ಜಾರಿ.

3. ಕೃಷಿ ಬೆಳವಣಿಗೆ ದರ ವಾರ್ಷಿಕ ಶೇ 4 ರ ಗುರಿ ಹೊಂದಲಾಗಿತ್ತು ಸಾಧನೆ ಶೇ 3.2 ರಷ್ಟು ಬೆಳವಣಿಗೆ ಆಯಿತು.

4. 2009ರ ಒಳಗಾಗಿ ಎಲ್ಲಾ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಮತ್ತು ದೇಶವನ್ನು ಗುಡಿಸಲು ಮುಕ್ತ ದೇಶವನ್ನಾಗಿಸುವುದು  ಉದ್ದೇಶವಾಗಿತ್ತು ಆದರೆ  ಸಾಧ್ಯವಾಗಲಿಲ್ಲ.

5. ಗುರಿ ಇಟ್ಟ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 9 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರ ಶೇ 7.9 ರಷ್ಟು.


ಹನ್ನೆರಡನೇ ಪಂಚವಾರ್ಷಿಕ ಯೋಜನೆ : - 2012 ರಿಂದ  2017. 

  • ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01,  2012 ರಿಂದ ಮಾರ್ಚ್ 31, 2017 ರವರೆಗೆ. 
  • ತ್ವರಿತ, ಸುಸ್ಥಿರ ಮತ್ತು ಎಲ್ಲರನ್ನೊಳಗೊಂಡ ಆರ್ಥಿಕ ಅಭಿರುದ್ದಿ ಉದ್ದೇಶದೊಂದಿಗೆ ಜಾರಿ. 

ಹನ್ನೆರಡನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 


1. ಗ್ರಾಮೀಣ ಟೆಲಿ ಸಾಂದ್ರತೆಯನ್ನು ಶೇ 70 ಕ್ಕೆ ಹೆಚ್ಚಿಸುವುದು.


2. ಭಾರತೀಯ ಕುಟುಂಬಗಳಿಗೆ ಬ್ಯಾಂಕಿಂಗ್ ಸೇವೆಯನ್ನು ಶೇ 90 ರಷ್ಟು ಹೆಚಿಸುವುದು .

3. ಕೃಷಿ ಬೆಳವಣಿಗೆ ದರವನ್ನು ಶೇ 4 ಕ್ಕೆ ಹೆಚ್ಚಿಸುವುದು.

4. ಬಡತನವನ್ನು ಶೇ 10 ರಷ್ಟು ಕಡಿಮೆಗೊಳಿಸುವುದು.

5. 50ಮಿಲಿಯನ್ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು.

6. ರಾಷ್ಟ್ರೀಯ ಆದಾಯವನ್ನು ಶೇ 8 ಕ್ಕೆ ಹೆಚ್ಚಿಸುವುದು.

7. ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡುವುದು.

8. ಲಿಂಗ ತಾರತಮ್ಯ ಹಾಗೂ ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡುವುದು.


ಸೂಚನೆ : - ಹನ್ನೆರಡನೇ ಪಂಚವಾರ್ಷಿಕ ಯೋಜನೆಯು 2014 ರಿಂದ NDA ಸರಕಾರ ಅಧಿಕಾರಕ್ಕೆ ಬಂದ ನಂತರ ಈ ಯೋಜನೆವು ಅಷ್ಟಾಗಿ ಜಾರಿಯಾಗಿರುವುದಿಲ್ಲ. 


ಕೃಷ್ಣ ನಾಯಕ್ ಸಿರಿಗೇರಿ...

Post a Comment

0 Comments