ಓದುವವರನ್ನ ಪ್ರೋತ್ಸಹಿಸಿ.!
"ಓದುವ ಹವ್ಯಾಸ ನನ್ನ ಬದುಕನ್ನ ಬದಲಿಸಿದ ಬಗೆ "
ಓದುವ ಹವ್ಯಾಸವು ನಮ್ಮ ಬದುಕನ್ನು ಬದಲಿಸುವ ಒಂದು ಅದ್ಬುತ ಪ್ರೇರಕ ಶಕ್ತಿಯಾಗಿದೆ. ದಿನ ನಿತ್ಯದ ಜೀವನದಲ್ಲಿ ಮನುಷ್ಯನಿಗೆ ಗಾಳಿ, ನೀರು, ಆಹಾರ ಎಷ್ಟು ಮುಖ್ಯನೋ ಹಾಗೆ ಮನುಷ್ಯ ನ ಜೀವನದಲ್ಲಿ ಶಿಕ್ಷಣದ ಪಾತ್ರವು ಅಷ್ಟೆ ಪ್ರಾಮುಖ್ಯತೆಯನ್ನು ಹೊಂದಿದೆ.
ಶಿಕ್ಷಣವನ್ನು ಕೇವಲ ಶಾಲೆ, ಕಾಲೇಜ್ ಗಳ ಪರೀಕ್ಷೆಗಳಲ್ಲಿ ಅಂಕಗಳಿಸಲು ಮಾತ್ರ ಸೀಮಿತಗೊಳಿಸದಂತೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರು ಮತ್ತು ಪೋಷಕರು ಅವರಿಗೆ ಜೀವನಕ್ಕೆ ಮಾರ್ಗದರ್ಶನ ನೀಡುವಂತಹ ಮತ್ತು ನೈತಿಕ ಹೊಣೆಗಾರಿಕೆ ಹಾಗೂ ಬದುಕುವ ಕಲೆಯನ್ನ, ಧೈರ್ಯವನ್ನು ತುಂಬುವಂತ ಶಿಕ್ಷಣ ನೀಡಿದಲ್ಲಿ ಮಾತ್ರ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯವು ಹೆಚ್ಚಾಗಿ ವಿದ್ಯಾರ್ಥಿಗಳು ಅತ್ಯಂತ ಪ್ರೀತಿಯಿಂದ ಶಿಕ್ಷಣವನ್ನು ಕಲಿಯುವಂತೆ ಪ್ರೇರಣೆ ನೀಡಬಲ್ಲದು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವು ಕೇವಲ ಅಂಕ ಗಳಿಸುವುದೇ ವಿದ್ಯಾರ್ಥಿಗಳು ಮತ್ತು ಪೋಷಕರ ಮೊದಲ ಗುರಿ ಎನ್ನುವಂತೆ ಇದೆ. ಶಾಲೆ-ಕಾಲೇಜುಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರೆ ಜೀವನದಲ್ಲಿವು ಅವರೇ ಯಶಸ್ಸು ಸಾಧಿಸುವವರು ಹಾಗೆ ಅವರೇ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂಬ ಪೋಷಕರ ನಂಬಿಕೆಯೇ ಸುಳ್ಳು .
ಕಾರಣ ನಾನು ಕಂಡಂತೆ ಅನೇಕ ವಿದ್ಯಾರ್ಥಿಗಳು ಶಾಲೆ ಹಂತದಲ್ಲಿ ಉತ್ತಮವಾಗಿ ಕಲಿತಿರುವ ವಿದ್ಯಾರ್ಥಿಗಳು ಕಾಲೇಜ್ ಹಂತಕ್ಕೆ ಬಂದಾಗ ಅಂತಹ ವಿದ್ಯಾರ್ಥಿಗಳು ಅನೇಕ ಹೊಸ ಹೊಸ ಆಕರ್ಷಣೆ ಗಳಿಗೆ ಬಲಿಯಾಗಿ ಶಿಕ್ಷಣವನ್ನೇ ಮರೆತಿರೋದನ್ನ ನೋಡಿದ್ದೇನೆ. ಹಾಗೆಯೇ SSLC PUC ಯಲ್ಲಿ ಫೇಲ್ ಆದವರು ಸಹ ಯಾವುದೋ ಒಂದು ಪ್ರೇರಣೆ ಶಕ್ತಿಯಿಂದ ಅಂತಹ ವಿದ್ಯಾರ್ಥಿಗಳು ಮುಂದೆ ತನ್ನ ಸೋಲನ್ನೇ ಮೆಟ್ಟಿ ನಿಂತು ಗೆಲವು ಪಡೆದ ವಿದ್ಯಾರ್ಥಿಗಳು ಸಹ ಅನೇಕರು ಇಂದು ನಮ್ಮ ಕಣ್ಣ ಮುಂದೆಯೇ ಇದ್ದಾರೆ.
ಬೇರೆ ವಿದ್ಯಾರ್ಥಿಗಳ ಬಗ್ಗೆ ಹೇಳುವುದಕ್ಕೆ ಮೊದಲು ನನ್ನ ಬಗ್ಗೆ ಹೇಳುತ್ತೇನೆ ಕೇಳಿ. ನಾನು ಕೂಡ ಶಾಲೆಯಲ್ಲಿ ಆಗಲಿ ಅಥವಾ ಕಾಲೇಜುಗಳಲ್ಲಿ ಅಷ್ಟೊಂದು ಓದಿದ ಮತ್ತು ಓದುವ ವಿದ್ಯಾರ್ಥಿ ಏನು ಆಗಿರಲಿಲ್ಲ. ನನ್ನ ಪದವಿ ವಿದ್ಯಾಭ್ಯಾಸ ಮುಗಿದ ನಂತರ ನನ್ನ ಜೀವನದಲ್ಲಿ ಕೆಲವು ವ್ಯಕ್ತಿಗಳ ಆಗಮನದಿಂದ ಕೆಲವು ಬದಲಾವಣೆ ಗೆ ಅದು ಕೂಡ ಮುಖ್ಯ ಕಾರಣವಾಗಿರಬುದು, ಅವರುಗಳು ನನ್ನ ಜೀವನ ದರ್ಶನ ವನ್ನೇ ನನಗೆ ಮಾಡಿಸಿದರು.
ಅಲ್ಲಿತನಕ ನಾನು ಯಾರು? ನಾನು ಏನು ಮಾಡುತ್ತಿದ್ದೇನೆ? ಅನ್ನೋ ಪರಿವೇ ಇಲ್ಲದೆ ಬದಕುತಿದ್ದವ ನಾನು. ನಂತರದಲ್ಲಿ ನನ್ನ ಸ್ನಾತಕೋತ್ತರ ಪದವಿಯಲ್ಲಿ ಹೇಗಾದರೂ ಸರಿ ಓದಲೇಬೇಕೆಂದು ನಿರ್ಧಾರ ಮಾಡಿ ಅಲ್ಲಿಂದಲೇ ನನ್ನ ನಿಜವಾದ ಶಿಕ್ಷಣ ಎನ್ನುವುದು ಆರಂಭವಾಗಿದ್ದು ಎಂದರೆ ತಪ್ಪಾಗಲಾರದು.
ಆ ಕ್ಷಣದಿಂದ ಇಲ್ಲಿ ತನಕನೂ ನನ್ನ ಪ್ರಯಾಣ ಮಾತ್ರ ನಿರಂತರವಾಗಿದೆ. ಹಾಗಂತ ನೀವು ಯಾಕೆ? ಶಿಕ್ಷಣದಿಂದ ಇನ್ನೂ ಯಶಸ್ಸು ಪಡೆದಿಲ್ಲ ಎಂದು ನಿಮ್ಮ ಮನದಲ್ಲಿ ಸಂಶಯ ಬರುವುದು ಸಹಜ. ಆದ್ರೆ ನಾನು ನಿರಂತರವಾಗಿ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದೇನೆ. ಇಂದಲ್ಲ ನಾಳೆ ನಾನು ಯಶಸ್ಸು ಪಡೆದೆ ಪಡೆಯುವೆ ಎಂಬ ಅಚಲವಾದ ನಂಬಿಕೆಯಲ್ಲಿ ಶಿಕ್ಷಣವನ್ನು ಮುಂದುವರೆಸುತ್ತಲೇ ಇದ್ದೇನೆ.
ಆದ್ದರಿಂದ ವಿದ್ಯಾರ್ಥಿಗಳಿಗೆ ನಾನು ಹೇಳಬಯಸುವುದು ಏನು ಎಂದರೆ ನೀವು ಜೀವನದಲ್ಲಿ ಏನೇ ಮಾಡಿದರೂ, ಶಿಕ್ಷಣವನ್ನು ಸಹ ನಿಮ್ಮ ದಿನ ನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಂಡು, ಪ್ರತಿ ದಿನವೂ ಏನಾದ್ರು ಕಲೆಯುವ ಮತ್ತು ಬರೆಯುವ ಅಭ್ಯಾಸವನ್ನು ನಿಮ್ಮ ಶಾಲೆ ಮತ್ತು ಕಾಲೇಜ್ ಹಂತಗಳಿಂದಲೇ ನಿರಂತರವಾಗಿ ಬೆಳೆಸಿಕೊಂಡು ಮತ್ತು ಉಳಿಸಿಕೊಂಡು ಹೋದದ್ದೇ ಆದಲ್ಲಿ ಜೀವನದಲ್ಲಿ ಉನ್ನತವಾದ ಗುರಿಯನ್ನು ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ.
ಶಿಕ್ಷಣದಿಂದಲೇ ನಮ್ಮ ಉದ್ಧಾರ ಮತ್ತು ಬೆಳವಣಿಗೆ ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಪ್ರತಿಯೊಬ್ಬ ಮನುಷ್ಯನಿಗೂ ತಪ್ಪಿದ್ದಲ್ಲ, ಆದ್ದರಿಂದ ಸೋತಾಗ ಎದೆಗುಂದದೆ ನಮ್ಮ ಮುಂದಿನ ಭವಿಷ್ಯದ ಕಡೆಗೆ ಸಣ್ಣ ಪ್ರಯತ್ನವನ್ನು ಮಾಡುತ್ತ ಮುನ್ನಡೆಯಬೇಕು. ಜೀವನಕ್ಕೆ ಶಿಕ್ಷಣ ಅವಶ್ಯಕವಾಗಿ ಬೇಕೇ ಬೇಕು ಆದ್ರೆ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಅಲ್ವೇ ಅಲ್ಲ ಸೋಲು-ಗೆಲುವು ಏನೇ ಬರುತ್ತಿರಲಿಲ್ಲ ಜೀವನದಲ್ಲಿ. ನಮ್ಮ ಪಯಣ ಮಾತ್ರ ಸಾಗುತ್ತಲೇ ಇರಲಿ...ಓದಿ, ಓದುತ್ತಲೇ ಇರಿ.... ಓದುವವರನ್ನ ಪ್ರೋತ್ಸಹಿಸಿ.!
ಕೃಷ್ಣ ನಾಯಕ್ ಸಿರಿಗೇರಿ
Post a Comment
0 Comments
Happy Friendship Day...... My Dear Friends.. !