ಭಾರತದ ಪಂಚವಾರ್ಷಿಕ ಯೋಜನೆಗಳು ಭಾಗ-1


ಪಂಚವಾರ್ಷಿಕ ಯೋಜನೆಗಳು :- ಪಂಚವಾರ್ಷಿಕ ಯೋಜನೆಗಳ ತಯಾರಿಕೆ ಯೋಜನಾ ಆಯೋಗದ ಕಾರ್ಯವಾದರೆ ಯೋಜನೆಗಳಿಗೆ ಅನುಮೋದನೆ ನೀಡುವುದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಕಾರ್ಯವಾಗಿದೆ. ಯೋಜನೆಗಳನ್ನು ಅನುಷ್ಠಾನಕ್ಕೆ  ತರುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ವಿಶ್ವದಲ್ಲಿ ಪ್ರಪ್ರಥಮ ಬಾರಿಗೆ ಜೋಸೆಫ್ ಸ್ಟಾಲಿನ್ ಅವರ ನೇತೃತ್ವದಲ್ಲಿ 1928 ರಲ್ಲಿ ರಷ್ಯಾ  ದೇಶವು ಮೊಟ್ಟಮೊದಲಬಾರಿಗೆ ಆರ್ಥಿಕ ಯೋಜನೆಗಳನ್ನು  ರೂಪಿಸಿ ಅದನ್ನು ಜಾರಿಗೆ ತಂದ ದೇಶವಾಗಿದೆ.

 ದೇಶದ ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ಯೋಜನೆಗಳೇ ಆಧಾರ  ಸ್ತಂಭಗಳು ಎಂಬುವುದು ವಿಶ್ವದ ನಾನಾ ರಾಷ್ಟ್ರಗಳಿಗೆ  ಮನವರಿಕೆಯಾಯಿತು. ಇದರ ಪರಿಣಾಮವಾಗಿ ಭಾರತ ದೇಶವು ಪಂಚವಾರ್ಷಿಕ ಯೋಜನೆಗಳನ್ನು ಆರಂಭಿಸಿತು.

ಮೊದಲನೇ ಪಂಚವಾರ್ಷಿಕ ಯೋಜನೆ : - 1951 ರಿಂದ 1956
  • ಮೊದಲನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1951 ರಿಂದ ಮಾರ್ಚ್ 31, 1956 ರ ವರೆಗೆ. ಯೋಜನೆಯ ಅಂತಿಮ ವರದಿ ಡಿಸೆಂಬರ್ 1952 ರಂದು ಸರಕಾರಕ್ಕೆ ಸಲ್ಲಿಕೆಯಾಯಿತು. 
  • ಯೋಜನೆಯ ಕೃಷಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿರುವುದರಿಂದ ಇದನ್ನು ಕೃಷಿ ಯೋಜನೆ ಎಂದು ಕರೆಯಲಾಯಿತು. 
  • ಹೆರಾಲ್ಡ್ ಡೊಮಾರ್ ಮಾದರಿಯ ಯೋಜನೆಯಾಗಿದೆ ಮತ್ತು ನಿಗದಿಪಡಿಸಿದ ಗುರಿಗಿಂತ ಹೆಚ್ಚು ಸಾಧಿಸಿದ ಯೋಜನೆಯಾಗಿದೆ. 
  • ಈ ಯೋಜನೆಯಲ್ಲಿ ಕೃಷಿ ಜೊತೆಗೆ  ನೀರಾವರಿ ಕ್ಷೇತ್ರಕ್ಕೆ ಸಹ  ಹೆಚ್ಚು ಒತ್ತುಕೊಟ್ಟು, ಭಾಕ್ರಾನಂಗಲ್, ಹಿರಾಕುಡ್, ಮೆಟ್ಟೂರ್ ಮತ್ತು ದಾಮೋದರ್ ಆಣೆಕಟ್ಟುಗಳಂತ ವಿವಿದ್ದುದೇಶ ನದಿ ಯೋಜನೆಗಳನ್ನ ಆರಂಭಿಸಿದರ ಜೊತೆಗೆ ವಿದ್ಯುತ್ ಮತ್ತು ಕುಡಿಯುವ ನೀರು ಮುಂತಾದವುಗಳಿಗೆ ಹೆಚ್ಚು ಆದ್ಯತೆ ನೀಡಲಾಯಿತು. 

ಮೊದಲನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 

1. ಮೊದಲನೇ ಪಂಚವಾರ್ಷಿಕ ಯೋಜನೆಗೆ ಸರಕಾರ ಮೀಸಲಿಟ್ಟ ಹಣ 2378 ಕೋಟಿ  ರೂಪಾಯಿ, ಖರ್ಚಾದ ಹಣ 1960 ಕೋಟಿ ರೂಪಾಯಿ. ಮೀಸಲಿಟ್ಟ ಹಣದಲ್ಲಿ ಉಳಿತಾಯ ಮಾಡಿದ ಮತ್ತು ಗುರಿಗಿಂತ ಹೆಚ್ಚು ಸಾಧನೆ ಮಾಡಿದ ಯೋಜನೆ ಇದಾಗಿದೆ.
2. ರಾಷ್ಟ್ರೀಯ ಆದಾಯ ಗುರಿ ಇಟ್ಟ ದರ ಶೇ 2.1 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ಬೆಳವಣಿಗೆ ದರವು ಶೇ 3.6 ರಷ್ಟು.
3. ಭಾರತದ ರಾಷ್ಟ್ರೀಯ ಆದಾಯದಲ್ಲಿ ಶೇ 18 ರಷ್ಟು ಮತ್ತು ತಲಾದಾಯದಲ್ಲಿ ಶೇ 11 ರಷ್ಟು ಹೆಚ್ಚಳ.
4. ಆಹಾರ ಉತ್ಪಾದನೆಯಲ್ಲಿ ಶೇ 17 ರಷ್ಟು ಮತ್ತು ಹತ್ತಿ ಉತ್ಪಾದನೆಯಲ್ಲಿ ಶೇ 45 ರಷ್ಟು ಹೆಚ್ಚಳ.
5. ಒಟ್ಟು ನೀರಾವರಿ ಯೋಜನೆಯ್ಲಲಿ ಶೇ 31 ರಷ್ಟು ಹೆಚ್ಚಳದೊಂದಿಗೆ ಈ ಯೋಜನೆವು ಅತ್ಯಂತ ಯಶಸ್ಸು ಸಾಧಿಸಿದ ಯೋಜನೆಯಾಗಿದೆ.

ಎರಡನೇ ಪಂಚವಾರ್ಷಿಕ ಯೋಜನೆ :- 1956 ರಿಂದ 1961.
  • ಎರಡನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1956 ರಿಂದ ಮಾರ್ಚ್ 31, 1961 ರವರೆಗೆ ಜಾರಿಯಲ್ಲಿತ್ತು. 
  • ಈ ಯೋಜನೆಯಲ್ಲಿ ಕೈಗಾರಿಕೆಗಳ ಅಭಿರುದ್ದಿಗೆ ಮೊದಲ ಆದ್ಯತೆ ನೀಡಿರುವುದರಿಂದ ಇದನ್ನು ಕೈಗಾರಿಕಾ ಯೋಜನೆ ಎಂದು ಕರೆಯಲಾಗುತ್ತಿದೆ. 
  • ಪ್ರೊ. ಪಿ ಸಿ ಮಹಾಲ ನೋಬಿಸ್ ಮಾದರಿಯ ಯೋಜನೆ ಎಂದು ಕರೆಯುತ್ತಾರೆ. 
  •  ಯೋಜನೆ ಅವಧಿಯಲ್ಲಿ ಮೂರು ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಗಳನ್ನು ಸ್ಥಾಪಿಸಲಾಯಿತು. 
  1. ರೂರೇಲ್ಕ, ಒರಿಸ್ ರಾಜ್ಯ ದಲ್ಲಿ ಪೂರ್ವದ ಜರ್ಮನಿ ಸಹಯೋಗದೊಂದಿಗೆ ನಿರ್ಮಾಣ. 
  2.  ದುರ್ಗಾಪುರ, ಪಚ್ಚಿಮ ಬಂಗಾಳ ರಾಜ್ಯದಲ್ಲಿ ಇಂಗ್ಲೆಂಡ್ ಸಹಯೋಗದೊಂದಿಗೆ ನಿರ್ಮಾಣ. 
  3.  ಭಿಲಾಯಿ, ಛತ್ತೀಸ್ ಘಡ್ ರಾಜ್ಯದಲ್ಲಿ ರಷ್ಯಾ ದೇಶದ ಸಹಯೋಗದೊಂದಿಗೆ ನಿರ್ಮಾಣ. 

ಎರಡನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು.

1. ರಾಷ್ಟ್ರೀಯ ಆದಾಯದ ಬೆಳವಣಿಗೆ ದರವನ್ನು ಶೇ 5 ಕ್ಕೆ ಹೆಚ್ಚಿಸುವುದು.
2. ಮೂಲ ಹಾಗೂ ಬೃಹತ್ ಕೈಗಾರಿಕೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದು.
3. ಸಂಪತ್ತಿನ ಸಮಾನ ಹಂಚಿಕೆ ಮತ್ತು ಆದಾಯದ ಅಸಮಾನತೆ ಯನ್ನು ಕಡಿಮೆ ಮಾಡುವ ಉದ್ದೇಶ.
4. ನಿರುದ್ಯೋಗದ ಸಮಸ್ಯೆಯನ್ನು ಕಡಿಮೆ ಮಾಡುವುದು.
5. ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ರೈಲ್ವೆ ಮಾರ್ಗಗಳ ಸ್ಥಾಪನೆಗೆ ಅವಕಾಶ ನೀಡಿತು.
6. ರಾಷ್ಟ್ರೀಯ ಆದಾಯದ ಬೆಳವಣಿಗೆ ಗುರಿ ಇಟ್ಟ ದರ ಶೇ 4.5 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ದರ ಶೇ 4.27 ರಷ್ಟು.

ಮೂರನೇ ಪಂಚವಾರ್ಷಿಕ ಯೋಜನೆ :- 1961 ರಿಂದ 1966.
  • ಮೂರನೇ ಪಂಚವಾರ್ಷಿಕ ಯೋಜನೆ  ಅವಧಿ ಏಪ್ರಿಲ್ 01,    1961 ರಿಂದ ಮಾರ್ಚ್ 31, 1966 ರವರೆಗೆ. 
  • ಮೂಲಸೌಕರ್ಯ ಹಾಗೂ ಭಾರಿ ಕೈಗಾರಿಕೆಗಳ ಅಭಿವೃದ್ಧಿಗೆ ಈ  ಯೋಜನೆಯಲ್ಲಿ ಅತಿ ಹೆಚ್ಚು ಆದ್ಯತೆ ನೀಡಲಾಗಿದೆ. 
  • ಗಾಡ್ಗಿಲ್ ಯೋಜನೆ ಮಾದರಿಯನ್ನು ಹೊಂದಿದ ಯೋಜನೆಯಾಗಿದೆ. 
 ಮೂರನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 

1. ರಾಷ್ಟ್ರೀಯ ಆದಾಯದ ವಾರ್ಷಿಕ ಬೆಳವಣಿಗೆ ದರವನ್ನು ಶೇಕಡಾ 5 ರಷ್ಟು  ಹೆಚ್ಚಿಸುವುದು.
2. ಆಹಾರ ಧಾನ್ಯಗಳ  ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು.
3. ಉದ್ಯೋಗದ ಅವಕಾಶಗಳನ್ನು ಹೆಚ್ಚೆಚ್ಚು ಸೃಷ್ಟಿಸುವುದು.
4. ರಾಜ್ಯ ವಿದ್ಯುತ್ ಮಂಡಳಿಯನ್ನು ಸ್ಥಾಪನೆ ಮಾಡಲಾಯಿತು.
5. ರಾಷ್ಟ್ರೀಯ ಆದಾಯದ ಬೆಳವಣಿಗೆ ಗುರಿ ಇಟ್ಟ ದರ ಶೇ 5.6 ರಷ್ಟು. ಸಾಧಿಸಿದ ರಾಷ್ಟ್ರೀಯ ಆದಾಯದ ದರ ಶೇ 2.4 ರಷ್ಟು.

ಯೋಜನೆಯು ಸಾಕಷ್ಟು ಯಶಸ್ಸು ಕಾಣುವಲ್ಲಿ ವಿಫಲವಾಯಿತು ಕಾರಣ ಯೋಜನೆಯ ಸಂದರ್ಭದಲ್ಲಿ ಅನೇಕ ಸಮಸ್ಯೆಗಳಾದ ಭಾರತ-ಚೀನ ಯುದ್ಧ 1962,  ಭಾರತ - ಪಾಕ್ ಯುದ್ಧ 1965 ಹಾಗೂ ಹಣದುಬ್ಬರ ಸಮಸ್ಯೆಯಿಂದ ಈ ಯೋಜನೆ ವಿಫಲವಾಯಿತು.

ವಾರ್ಷಿಕ ಯೋಜನೆಗಳು /ಯೋಜನಾ ರಜಾ ಅವಧಿ :- 1966 ರಿಂದ 1969.

ಸರ್ಕಾರವು ಮೂರು ವರ್ಷಗಳವರೆಗೆ 1966 ರಿಂದ 1969 ತನಕ ಪಂಚವಾರ್ಷಿಕ ಯೋಜನೆಗಳ ಬದಲಾಗಿ ವಾರ್ಷಿಕ ಯೋಜನೆಯನ್ನು ಘೋಷಣೆ ಮಾಡಿತು. ದೇಶದಲ್ಲಿ ಬರಪರಿಸ್ಥಿತಿ ಉಂಟಾದರಿಂದ ರಫ್ತುಗಳನ್ನು  ಹೆಚ್ಚಿಸಲು ರೂಪಾಯಿಯ  ಅಪಮೌಲ್ಯಕರಣ  ಮಾಡಲಾಯಿತು. ಕೃಷಿ ಕ್ಷೇತ್ರ ಮತ್ತು ಕೈಗಾರಿಕೆಗಳಿಗೆ ಸಮಾನ ಆದ್ಯತೆಯನ್ನು ವಾರ್ಷಿಕ  ಯೋಜನೆಯಲ್ಲಿ ನೀಡಲಾಯಿತು.

ನಾಲ್ಕನೇ ಪಂಚವಾರ್ಷಿಕ ಯೋಜನೆ :- 1969 ರಿಂದ 1974.
  •  ನಾಲ್ಕನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1969 ರಿಂದ ಮಾರ್ಚ್ 31, 1974 ರವರೆಗೆ ಜಾರಿಯಲ್ಲಿತ್ತು. 
  •  ಈ ಯೋಜನೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಮತ್ತು ಸ್ವಾವಲಂಬನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಯಿತು. 

 ನಾಲ್ಕನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 

1. 1969 ಜುಲೈ 19 ರಂದು 14 ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಲಾಯಿತು.
2. ಹಸಿರು ಕ್ರಾಂತಿಯ ಯಶಸ್ಸು  ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಅಧಿಕ ಇಳುವರಿ ತಳಿಗಳ ಬಳಕೆ ಮಾಡಲಾಯಿತು. ನೀರಾವರಿ,  ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಗೆ ಆದ್ಯತೆ ನೀಡಲಾಯಿತು.
3. ಜನಸಂಖ್ಯಾ ನಿಯಂತ್ರಣ ದೊಂದಿಗೆ ಜನರ ಜೀವನಮಟ್ಟ ಹೆಚ್ಚಿಸುವುದು.
4. ಪ್ರಾದೇಶಿಕ ಅಸಮತೋಲನ ನಿರ್ಮೂಲನೆ ಮಾಡುವುದು.
5. ರಾಷ್ಟ್ರೀಯ ಆದಾಯದ ಬೆಳವಣಿಗೆ ಗುರಿಯಿಟ್ಟ ದರ ಶೇ 5.5 ರಷ್ಟು  ಸಾಧಿಸಿದ ರಾಷ್ಟ್ರೀಯ ಆದಾಯದ ದರ ಶೇ 3.3 ರಷ್ಟು.

ಐದನೇ ಪಂಚವಾರ್ಷಿಕ ಯೋಜನೆ :- 1974 ರಿಂದ 1978.
  • ಐದನೇ ಪಂಚವಾರ್ಷಿಕ ಯೋಜನೆಯ ಅವಧಿ ಏಪ್ರಿಲ್ 01, 1974 ರಿಂದ ಮಾರ್ಚ್ 31, 1978 ರವರೆಗೆ. 
  • ಬಡತನ ನಿರ್ಮೂಲನೆಗೆ ಮೊದಲ ಆದ್ಯತೆಯನ್ನು ಈ  ಯೋಜನೆ ನೀಡಲಾಯಿತು. 
  • ರಾಜಕೀಯ ಅಸ್ಥಿರತೆಯಿಂದಾಗಿ ಮತ್ತು ಸರ್ಕಾರ ಬದಲಾವಣೆಯಿಂದ ಅವಧಿಗಿಂತ ಒಂದು ವರ್ಷ ಮೊದಲೇ ಪೂರ್ಣಗೊಂಡ ಯೋಜನೆ ಆಗಿದೆ. 

 ಐದನೇ ಪಂಚವಾರ್ಷಿಕ ಯೋಜನೆಯ ಗುರಿ ಮತ್ತು ಉದ್ದೇಶಗಳು. 

1.  ಈ ಯೋಜನೆಯ ಅಂತಿಮ ಕರಡನ್ನು ಸಿದ್ಧಪಡಿಸಿದವರು ಡಾಕ್ಟರ್ ಡಿಪಿ ಧಾರ್ ರವರು.
2. ಕನಿಷ್ಠ ಅಗತ್ಯಗಳ ಕಾರ್ಯಕ್ರಮ ಜಾರಿ-Minimum Needs Program's.
3. ಇಪತ್ತು ಅಂಶಗಳ ಕಾರ್ಯಕ್ರಮ ಜಾರಿ-Twenty Policys Programs.
4. ಮೂಲ ಸೌಕರ್ಯಗಳಾದ ಶಿಕ್ಷಣ,  ಕುಡಿಯುವ ನೀರು, ವಸತಿ ಸೌಲಭ್ಯ, ರಸ್ತೆ, ಔಷಧಿಗಳು  ಗ್ರಾಮೀಣ ಭಾಗದ ಜನರಿಗೆ ಒದಗಿಸಿಕೊಡುವುದು.
5. ಬಡತನ ನಿರ್ಮೂಲನೆಗಾಗಿ ಗರೀಬಿ ಹಟಾವೋ ಜಾರಿ.
6. ರಫ್ತು ಉತ್ತೇಜನ ಮತ್ತು ಆಮದು ನಿಯಂತ್ರಣಕ್ಕೆ ಒತ್ತುಕೊಡುವುದು.
7. ರಾಷ್ಟ್ರೀಯ ಆದಾಯದ ಬೆಳವಣಿಗೆ ಗುರಿಯಿಟ್ಟ ದರ ಶೇ 5.5 ರಷ್ಟು  ಸಾಧಿಸಿದ ರಾಷ್ಟ್ರೀಯ ಆದಾಯದ ದರ ಶೇ 5 ರಷ್ಟು.

ಉರುಳುವ ಯೋಜನೆಗಳು :- 1978 ರಿಂದ 1980.
  • ಉರುಳುವ ಯೋಜನೆಗಳನ್ನು ಮೊಟ್ಟಮೊದಲು ಜಗತ್ತಿಗೆ ಪರಿಚಯಿಸಿದವರು ಸ್ವಿಡೆನ್  ದೇಶದ ಅರ್ಥಶಾಸ್ತ್ರಜ್ಞ ಗುನ್ನಾರ್ ಮಿರ್ಡಾಲ್. ಇವರ ಪ್ರಸಿದ್ಧ ಕೃತಿ  "ಏಶಿಯನ್ ಡ್ರಾಮಾ" ಈ ಕೃತಿಯಲ್ಲಿ ಏಷ್ಯಾ ಖಂಡದಲ್ಲಿ ಬರುವ ವಿವಿಧ ರಾಷ್ಟ್ರಗಳ ಆರ್ಥಿಕ ಸಮಸ್ಯೆ ಮತ್ತು ಚಿಂತನೆ ಕುರಿತು ಉಲ್ಲೇಖವಿದೆ. 
  • ಉರುಳುವ ಯೋಜನೆಗಳೆಂದರೆ  ಅಪೂರ್ಣಗೊಂಡಂತ ಸರಕಾರದ ಅಭಿರುದ್ದಿ ಯೋಜನೆಗಳೇ ಉರುಳುವ ಯೋಜನೆಗಳಾಗಿವೆ. 
  • ಈ ಯೋಜನೆ ಅವಧಿಯಲ್ಲಿ ಅಂದರೆ 1979 ರಲ್ಲಿ ಗ್ರಾಮೀಣ ಯುವಕರಿಗೆ ತರಬೇತಿ ಮತ್ತು ಸ್ವ  ಉದ್ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಅವಧಿಯಲ್ಲಿ ಮುರಾರ್ಜಿ ದೇಸಾಯಿಯವರು ಭಾರತದ ಪ್ರಧಾನ್ ಮಂತ್ರಿಗಳು ಆಗಿದ್ದರು.


ಕೃಷ್ಣ ನಾಯಕ್ ಸಿರಿಗೇರಿ....



Post a Comment

2 Comments

  1. Replies
    1. Tq u brother.... ಹಾಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

      Delete

Happy Friendship Day...... My Dear Friends.. !