ಸಾಮಾನ್ಯ ಜ್ಞಾನ ವಿಷಯದ ಪಠ್ಯಕ್ರಮ


ಪೀಠಿಕೆ :- ಇಂದಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯು ಅತ್ಯಂತ  ಪ್ರಮುಖ್ಯತೆಯನ್ನು ಹೊಂದಿರುವ ಪತ್ರಿಕೆಯಾಗಿದೆ. ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ನಾವು ಅತೀ ಹೆಚ್ಚು ಅಂಕಗಳನ್ನು ಪಡೆದದ್ದೇ ಆದಲ್ಲಿ ನಮ್ಮ ಹುದ್ದೆ ಪಡೆಯುವಲ್ಲಿ ಬಹು ಬೇಗನೆ ಯಶಸ್ಸುನ್ನು ಗಳಿಸಲು ಸಾಧ್ಯವಾಗುತ್ತದೆ.  

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ನಡೆಸುವ SDA, FDA, KAS ಹಾಗೂ PC, PSI ಮತ್ತು ಕೇಂದ್ರ ಸರಕಾರ ನಡೆಸುವ RRB,ರೈಲ್ವೆ SSC, ಮತ್ತು ನಾಗರೀಕ ಸೇವಾ ಪರೀಕ್ಷೆ ಗಳಿಗೆ ಸಾಮಾನ್ಯ ಜ್ಞಾನ ಪತ್ರಿಕೆಯ ಪಠ್ಯಕ್ರಮವನ್ನು ತಿಳಿಸಿಕೊಡುವ ನನ್ನದೊಂದು ಸಣ್ಣ ಪ್ರಯತ್ನ ಇಲ್ಲಿದೆ. 

ಕಾರಣ ಇಂದಿನ ಸ್ಪರ್ಧಾರ್ಥಿಗಳು ಸರಿಯಾದ ಪಠ್ಯಕ್ರಮವನ್ನು ತಿಳಿಯದೆ ಅಭ್ಯಾಸ ಮಾಡುವವರು ಇದ್ದಾರೆ ಅದು ತಪ್ಪು.  ಮೊದಲು ಸಂಪೂರ್ಣವಾಗಿ ಪಠ್ಯಕ್ರಮವನ್ನು ತಿಳಿದುಕೊಳ್ಳದೆ ಯಾವುದೇ ಪರೀಕ್ಷೆಗಳಲ್ಲಿ ಯಶಸ್ ಗಳಿಸಲು  ಸಾಧ್ಯವಿಲ್ಲ ಆದ್ದರಿಂದ ಎಲ್ಲ ಸ್ಪರ್ಧಾರ್ಥಿಗಳು ಇದರ ಉಪಯೋಗವನ್ನು  ಪಡೆದುಕೊಂಡು ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲಿ ಎಂದು ಆರೈಸುವ ಇಂತಿ ನಿಮ್ಮ ಸ್ನೇಹಿತ.. 
                 

ಸಾಮಾನ್ಯ ಜ್ಞಾನ ಪತ್ರಿಕೆಯ ಪಠ್ಯಕ್ರಮ
1) ಭಾರತ ಸಂವಿಧಾನ 
2) ಇತಿಹಾಸ (ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸ )
3) ಭೂಗೋಳ (ಭಾರತದ ಭೂಗೋಳ ಮತ್ತು ಕರ್ನಾಟಕದ ಭೂಗೋಳ )
4) ಸಾಮಾನ್ಯ ವಿಜ್ಞಾನ 
5) ಅರ್ಥಶಾಸ್ತ್ರ 
6) ವಿಜ್ಞಾನ ಮತ್ತು ತಂತ್ರಜ್ಞಾನ 
7) ಪ್ರಚಲಿತ ಘಟನೆಗಳು 
8) ಮಾನಸಿಕ ಸಾಮರ್ಥ್ಯ 

1) ಭಾರತ ಸಂವಿಧಾನ :-
  • ಸಂವಿಧಾನ ದ ಪೀಠಿಕೆ.
  • ಪೌರತ್ವ.
  • ಮೂಲಭೂತ ಹಕ್ಕುಗಳು.
  • ರಾಜ್ಯ ನಿರ್ದೇಶಕ ತತ್ವಗಳು, ಮೂಲಭೂತ ಕರ್ತವ್ಯಗಳು.
  • ಸಂಸತ್ತು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ್ ಮಂತ್ರಿ ಮತ್ತು ಮಂತ್ರಿ ಮಂಡಲ.
  • ಅರ್ಟಾನಿ ಜನರಲ್, ಕಂಟ್ರೋಲರ್ ಮತ್ತು ಆಡಿಟ್ ಜನರಲ್.
  • ಲೋಕಸಭಾ ಸ್ಪೀಕರ್, ಸಂಸತ್ತಿನ ಸಮಿತಿಗಳು.
  • ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳು.
  • ಹಣಕಾಸು ಆಯೋಗ, ಚುನಾವಣೆ ಆಯೋಗ, ಕೇಂದ್ರ ಲೋಕ ಸೇವಾ ಆಯೋಗ.
  • ಸಂವಿಧಾನಾತ್ಮಕ ಸಂಸ್ಥೆಗಳು ಮತ್ತು ಶಾಸನಾತ್ಮಕ ಸಂಸ್ಥೆಗಳು.
  • ಸ್ಥಳೀಯ ಸರಕಾರಗಳು.
( ಇಷ್ಟು ವಿಷಯಗಳನ್ನ ಮೊದಲು ಚೆನ್ನಾಗಿ ತಿಳಿದುಕೊಂಡಾಗ ಮಾತ್ರ ಸಂವಿಧಾನವನ್ನು ಅರ್ಥೈಸಿಕೊಳ್ಳಲು  ಸುಲುಭ ಆಗುತ್ತದೆ )

2) ಇತಿಹಾಸ 

ಪ್ರಾಚೀನ ಇತಿಹಾಸ 
  • ಸಿಂಧೂ ಮತ್ತು ಹರಪ್ಪ ನಾಗರೀಕತೆ.
  • ಆರ್ಯರು ಮತ್ತು ವೇದ ಉಪನಿಷತ್ ಗಳು.
  • ಮೌರ್ಯ ಸಾಮ್ರಾಜ್ಯ.
  • ಬೌದ್ಧ ಧರ್ಮ ಮತ್ತು ಜೈನ್ ಧರ್ಮಗಳ ಉಗಮ.
  • ಗುಪ್ತ ಸಾಮ್ರಾಜ್ಯ.
  • ಶುಂಗರು, ಕಣ್ವರು, ಕುಶಾನರು, ವರ್ಧನ ಸಾಮ್ರಾಜ್ಯ.
ಮಧ್ಯಕಾಲೀನ ಇತಿಹಾಸ 
  • ಮೊಹಮದ್ ಗೋರಿ ಮತ್ತು ಘಜನಿ ಮಹಮದ್ ನ ದಂಡೆಯಾತ್ರೆಗಳು. 
  • ದೆಹಲಿ ಸುಲ್ತಾನರು. 
  • ಮೊಘಲರು. 
  • ಭಕ್ತಿ ಪಂಥ ಚಳುವಳಿ ಮತ್ತು ಸಮಾಜ ಸುಧಾರಕರು. 
  • ಮರಾಠರು 
  • ಹೈದೆರಾಬಾದ್ ನಿಜಾಮರು 
ಆಧುನಿಕ ಭಾರತ ಇತಿಹಾಸ 
  • ವಿದೇಶಿಯರ ಆಗಮನ.
  • ಬ್ರಿಟಿಷ್ ಸಾಮ್ರಾಜ್ಯದ  1600 ರಿಂದ 1947 ತನಕ ಆಡಳಿತ ಮತ್ತು ಸುಧಾರಣೆಗಳು. 
  • 1857ರ ಪ್ರಥಮ ಸ್ವತಂತ್ರ ದಂಗೆ.
  • ರಾಜ ರಾಮ್ ಮೋಹನ್ ರಾಯ್ ಅವರ ಸತಿ ಸಹಗಮನ ಪದ್ಧತಿ ರದ್ದತಿ. 
  • ವಿಶ್ವರ್ ಚಂದ್ರ ವಿದ್ಯಾಸಾಗರ ಅವರ ವಿಧವಾ ಪುನರ್ ವಿವಾಹ ಕಾಯಿದೆ. 
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಮತ್ತು ಅದರ ಸಮಾವೇಶಗಳು ಮತ್ತು ಮುಖ್ಯ ಉದ್ದೇಶಗಳು. 
  • ಮಂದಗಾಮಿಗಳು ಮತ್ತು ತಿವ್ರಗಾಮಿಗಳು.
  • ಗಾಂಧೀಯುಗ 1900 ರಿಂದ 1919.
  • ಗಾಂಧೀಯುಗ 1920 ರಿಂದ 1947.
ಕರ್ನಾಟಕ ಇತಿಹಾಸ 
  • ಕದಂಬರು.
  • ರಾಷ್ಟ್ರಕೂಟರು.
  • ಬಾದಾಮಿ ಚಾಲುಕ್ಯರು. 
  • ಕಲ್ಯಾಣಿ ಚಾಲುಕ್ಯರು.
  • ಗಂಗರು.
  • ಹೊಯ್ಸಳರು.
  • ವಿಜಯನಗರ ಸಾಮ್ರಾಜ್ಯ. 
  • ಬಹುಮನಿ ಸಾಮ್ರಾಜ್ಯ. 
  • ಬಿಜಾಪುರ್ ಅಧಿಲ್ ಶಾಹಿಗಳು.
  • ಮೈಸೂರು ಒಡೆಯರು. 
  • ಕೆಳದಿ ನಾಯಕರು. 
  • ಹೈದೆರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತ. 
  • ಚಿತ್ರದುರ್ಗ ದ ಮದಕರಿ ನಾಯಕರು.
  • ಮೈಸೂರು ಕಮಿಷನರ್ ಗಳ ಆಡಳಿತ.
  • ದೊಂಡಿಯ ವಾಘಾ ದಂಗೆ.  
  • ಹಲಗಲಿ ಬೇಡರ ದಂಗೆ. 
  • ಕಿತ್ತೂರು ದಂಗೆ. 
  • ಕರ್ನಾಟಕ ವಿದ್ಯಾವರ್ಧಕ ಸಂಘ.
  • ಮೈಸೂರು ದಿವಾನರು.
  • ಶಿವಪುರ ಧ್ವಜಸತ್ಯಾಗ್ರಹ. 
  • ಈಸೂರು ಸ್ವತಂತ್ರ ಘೋಷಣೆ. 
  • ವಿದುರಾಶ್ವತ್ ಘಟನೆ. 
  • ಕನ್ನಡ ಸಾಹಿತ್ಯ ಪರಿಸತು ಸ್ಥಾಪನೆ.
  • ಬೆಳಗಾಂ ಕಾಂಗ್ರೆಸ್ ಅಧಿವೇಶನ.
  • ಅಂಕೋಲಾ ಉಪ್ಪಿನ ಸತ್ಯಾಗ್ರಹ.
  • ಮೈಸೂರು ಚಲೋ ಚಳುವಳಿ. 
3) ಭಾರತದ ಭೂಗೋಳ :-
  • ಭಾರತದ ಪ್ರಾಕೃತಿಕ ಸ್ವರೂಪಗಳು 
  • ಭಾರತದ ಮೇಲ್ಮೈ ಲಕ್ಷಣಗಳು 
  • ಭಾರತದ ವಾಯುಗುಣ 
  • ಭಾರತದ ಮಣ್ಣುಗಳು 
  • ಭಾರತದ ಸ್ವಾಭಾವಿಕ ಸಸ್ಯವರ್ಗ ಮತ್ತು ಪ್ರಾಣಿವರ್ಗ 
  • ಭಾರತದ ಸಾರಿಗೆ ವ್ಯವಸ್ಥೆ 
  • ಭಾರತದ ನದಿಗಳು 
  • ಭಾರತದ ವಿವಿದೋದ್ದೇಶ ಯೋಜನೆಗಳು. 
  • ಭಾರತದ ವ್ಯವಸಾಯ
  • ಭಾರತದ ನೀರಾವರಿ
  • ಭಾರತದ ಖನಿಜ ಸಂಪನ್ಮೂಲಗಳು
  • ಭಾರತದ ಪ್ರಮುಖ ಕೈಗಾರಿಕೆ ಗಳು.
  • ಭಾರತದ ವಿದ್ಯುಚ್ಛಕ್ತಿ 
  • ಜನಗಣತಿ 
  • ಭಾರತದ ವಿಶ್ವ ಪಾರಂಪರಿಕ ಸ್ಮಾರಕಗಳು ಮತ್ತು ತಾಣಗಳು
ಕರ್ನಾಟಕದ ಭೂಗೋಳ 
  • ಕರ್ನಾಟಕದ ಪ್ರಾಕೃತಿಕ ವಿಭಾಗಗಳು.
  • ಕರ್ನಾಟಕದ ನದಿಗಳು.
  • ಕರ್ನಾಟಕದ ನೀರಾವರಿ. 
  • ಕರ್ನಾಟಕದ ಖನಿಜ ಸಂಪತ್ತು. 
  • ಕರ್ನಾಟಕದ ಕೈಗಾರಿಕೆಗಳು. 
  • ಕರ್ನಾಟಕದ ವ್ಯವಸಾಯ. 
  • ಕರ್ನಾಟಕದ ಸಾರಿಗೆ. 
  • ಕರ್ನಾಟಕದ ವಿದ್ಯುತ್ ಶಕ್ತಿ. 
  • ಕರ್ನಾಟಕದ ಜನಗಣತಿ. 
  • ಕರ್ನಾಟಕದ ಪ್ರವಾಸಿತಾಣಗಳು ಮತ್ತು ಪ್ರಸಿದ್ಧ ಸ್ಮಾರಕಗಳು. 
4) ಸಾಮಾನ್ಯ ವಿಜ್ಞಾನ :-. 

ಭೌತ ಶಾಸ್ತ್ರ 
  • ಕಾಂತತ್ವ 
  • ವಿದ್ಯುತ್, ವಿದ್ಯುತ್ ಕಾಂತಿಯ ಒತ್ತಡ  
  • ಚಲನೆ 
  • ಬಲ ಮತ್ತು ಒತ್ತಡ, ಕೆಲಸ ಶಕ್ತಿ ಮತ್ತು ಸಾಮರ್ಥ್ಯ 
  • ಗುರುತ್ವ, ಬೆಳಕು, ಶಬ್ದ ಮತ್ತು ವಿಕಿರಣ ಪಟುತ್ವ.
  • ಬೈಜಿಕ ಸಮ್ಮಿಲನ, ಬೈಜಿಕ ವಿದಳನ. 
  • ಖಗೋಳ ಶಾಸ್ತ್ರ.
ರಸಾಯನಶಾಸ್ತ್ರ 
  • ದ್ರವಗಳ ಸ್ವರೂಪ 
  • ಆವರ್ತಕ ಕೋಷ್ಟಕಗಳು ಮತ್ತು ರಾಸಾಯನಿಕ ಬಂಧಗಳು 
  • ಆಮ್ಲಗಳು ಮತ್ತು ಪ್ರತ್ಯಾಮ್ಲಗಳು 
  • ನೀರು 
  • ಲೋಹಗಳು ಮತ್ತು ಅಲೋಹಗಳು 
  • ಹೈಡ್ರೋಕಾರ್ಬನ್ ಗಳು 
  • ಇಂಧನಗಳು 
  • ದ್ರಾವಣಗಳು ಮತ್ತು ಕಲಿಲಗಳು. 
ಜೀವಶಾಸ್ತ್ರ 
  • ಜೀವ ಜಗತ್ತು, ಜೀವಕೋಶ ಮತ್ತು ಕೋಶ ವಿಭಜನೆ 
  • ಅಂಗಾಂಶಗಳು ಮತ್ತು ಸೂಕ್ಷ್ಮಾಣುಜೀವಿಗಳು 
  • ಜೀರ್ಣಕ್ರಿಯೆ, ದ್ಯುತಿ ಸಂಶ್ಲೇಷಣೆ, ಉಸಿರಾಟ, ರಕ್ತ ಪರಿಚಲನೆ ಮತ್ತು ನರವ್ಯೂವ 
  • ಜ್ಞಾನೇಂದ್ರಿಯಗಳು 
  • ಹಾರ್ಮೋನಗಳು 
  • ಪರಿಸರ ವಿಜ್ಞಾನ 
  • ತಳಿಶಾಸ್ತ್ರ 
  • ಜೈವಿಕ ತಂತ್ರಜ್ಞಾನ. 

5) ಅರ್ಥಶಾಸ್ತ್ರ :- 
  • ಭಾರತದ ಅರ್ಥ ವ್ಯವಸ್ಥೆ ಮತ್ತು ಆರ್ಥಿಕತೆ 
  • ಜನಸಂಖ್ಯೆ ಶಾಸ್ತ್ರ ಮತ್ತು ಭಾರತದ ರಾಷ್ಟ್ರೀಯ ಆದಾಯ 
  • ಭಾರತದಲ್ಲಿ ಬಡತನ ಮತ್ತು ನಿರುದ್ಯೋಗ,  ಆರ್ಥಿಕ ಯೋಜನೆಗಳು 
  • ಭಾರತದ ಕೃಷಿ, ಕೈಗಾರಿಗೆ ಮತ್ತು ಸೇವಾ ವಲಯಗಳು
  • ಭಾರತದ ಸಾರ್ವಜನಿಕ ಹಣಕಾಸು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ 
  • ಅಂತಾರಾಷ್ಟ್ರೀಯ ಸಂಘಟನೆಗಳು 
  • ಭಾರತದ ಆರ್ಥಿಕ ಸಮೀಕ್ಷೆ 
  • ಭಾರತದ ಮುಂಗಡ ಪತ್ರ 
  • ಕರ್ನಾಟಕದ ಆರ್ಥಿಕತೆ. 
6) ವಿಜ್ಞಾನ ಮತ್ತು ತಂತ್ರಜ್ಞಾನ :-
  • ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ISRO)
  • ರಕ್ಷಣಾ ಸಂಶೋಧನೆ ಮತ್ತು ಅಭಿರುದ್ದಿ ಸಂಘಟನೆ (DRDO)
  • HAL, BHEL, BEML, BEL BHARAT DYNAMIC WORK, ಮುಂತಾದವ.
7) ಪ್ರಚಲಿತ ಘಟನೆಗಳು 
  • ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಗು ಹೋಗುಗಳ ದಿನ ನಿತ್ಯದ ಚಟುವಟಿಗಳು. 
  • ಅಂತಾರಾಷ್ಟ್ರೀಯ ಸಂಘಟನೆಗಳ ಸಮಾವೇಶಗಳು ಮತ್ತು ಧ್ಯೆಯ ಉದ್ದೇಶಗಳುಹಾಗೂ ಸದಸ್ಯ ರಾಷ್ಟ್ರಗಳು  
  • ಪರಿಸರ ಸಮಾವೇಶಗಳು. 
  • ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರು.
  • ನೆರೆ ಹೊರೆ ರಾಷ್ಟ್ರಗಳ ರಾಜಕೀಯ ಸ್ಥಿತಿಗತಿಗಳು ಮತ್ತು ಆರ್ಥಿಕ ಒಪ್ಪಂದಗಳು. 
8) ಮಾನಸಿಕ ಸಾಮರ್ಥ್ಯ  
  • ಸರಳ ಬಡ್ಡಿ ಮತ್ತು ಚಕ್ರ ಬಡ್ಡಿ ಮೇಲಿನ ಸಮಸ್ಯೆಗಳು. 
  • ಸರಣಿಗಳು. 
  • ಕೋಡಿಂಗ್ ಮತ್ತು ಡಿಕೋಡಿಂಗ್. 
  • ವಯಸ್ಸಿನ ಮೇಲಿನ ಸಮಸ್ಯೆಗಳು. 
  • ರೈಲು ಸಮಸ್ಯೆ ಗಳು.
  • ತಾರ್ಕಿಕ ಪ್ರಶ್ನೆಗಳು, ಹೇಳಿಕೆ ಗಳು.
  • ಕೆಲಸ ಮತ್ತು ಕಾಲ ಹಾಗೂ ದೂರ ಮತ್ತು ವೇಗಕ್ಕೆ ಸಂಬಂದಿಸಿದ ಸಮಸ್ಯೆ ಗಳು. 
(SSLC ಮಟ್ಟದ ಮಾನಸಿಕ ಸಾಮರ್ಥ್ಯದ ದಿನ ನಿತ್ಯ ಜೀವನದಲಿ ಗಣಿತದ ಬಳಸುವಿಕೆಯ ಹಂತದಲ್ಲಿ ಪ್ರಶ್ನೆಗಳನ್ನು ಕೇಳಾಗುತ್ತದೆ)  

ಉಪಸಂಹಾರ :- ಈ ಮೇಲಿನ ಸಾಮಾನ್ಯ ಜ್ಞಾನ ದ ಪಠ್ಯಕ್ರಮದಲ್ಲಿ  ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸರಳವಾಗಿ ಮತ್ತು ಪರೀಕ್ಷೆ ಗೆ ಏನನ್ನ ಓದಬೇಕು ಹಾಗೂ  ಯಾವುದನ್ನ ಓದಿದರೆ ಪರೀಕ್ಷೆ ಲೀ ಉತ್ತಮವಾದ ಅಂಕಗಳನ್ನ ಪಡೆಯಲು  ಸಾಧ್ಯ ಅನ್ನೋದನ್ನ  ತಿಳಿಸುವ ಪ್ರಯತ್ನ ಮಾಡಿದೆನೇ.

ಹೊಸದಾಗಿ ಓದುವ ವಿದ್ಯಾರ್ಥಿಗಳಿಗೆ ಇಷ್ಟು ಸಾಕು. ಇದರಲ್ಲಿ ಇನ್ನೂ ಪೂರ್ಣವಾದ ಪಠ್ಯಕ್ರಮ ವನ್ನು ಸೇರಿಸಿಲ್ಲ ಮುಂದಿನ ಹಂತದಲ್ಲಿ ಸೇರಿಸಲಾಗುವುದು. ಸಣ್ಣ ಪುಟ್ಟ ತಪ್ಪು ಗಳು ಇದ್ದಲ್ಲಿ ಕ್ಷಮೆ ಇರಲಿ... ಅದ್ನ ಪರಿಶೀಲಿಸಿ ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೀನಿ.... ಜ್ಞಾನವನ್ನು ಪಡೆಯೋಣ, ಜ್ಞಾನವನ್ನು ಹಂಚೋಣ... ಎಲ್ಲರಿಗೂ ಧನ್ಯವಾದಗಳು. !


ಕೃಷ್ಣ ನಾಯಕ್ ಸಿರಿಗೇರಿ...... 

Post a Comment

0 Comments