ಸಂವಿಧಾನದಲ್ಲಿ ಆಗಿರುವ ಪ್ರಮುಖ ತಿದ್ದುಪಡಿಗಳ ಹಿನ್ನೋಟ ಭಾಗ-2

ಮುರಾರ್ಜಿ ದೇಸಾಯಿ 


44 ನೇ ತಿದ್ದುಪಡಿ :- ನಮ್ಮ ಸಂವಿಧಾನದಲ್ಲಿ 42 ನೇ ತಿದ್ದುಪಡಿ ನಂತರ ಎರಡನೇ ಅತೀ ಮಹತ್ವದ ತಿದ್ದುಪಡಿಯಾಗಿದೆ. ಇದರಲ್ಲಿ ಸಹ ಅನೇಕ ಮಹತ್ವದ ವಿಷಯಗಳನ್ನು ಸೇರಿಸಿ ಅಂದಿನ ಜನತಾ ಸರಕಾರದ ಪ್ರಧಾನ ಮಂತ್ರಿಗಳು ಆದ ಮುರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ 1978 ರಲ್ಲಿ ತಿದ್ದುಪಡಿ ತಂದು ಜಾರಿ ಮಾಡಲಾಯಿತು.

ಈ ತಿದ್ದುಪಡಿಯಲ್ಲಿ ಸೇರಿಸಲಾದ ಪ್ರಮುಖ ವಿಷಯಗಳು. 
  • 31 ನೇ ವಿಧಿಯಲ್ಲಿದ್ದ ಆಸ್ತಿಯ ಹಕ್ಕನ್ನು ತೆಗೆದುಹಾಕಿ 300A ವಿಧಿಯಲ್ಲಿ ಕಾನೂನು ಬದ್ಧ ಹಕ್ಕನ್ನಾಗಿ ಮಾಡಲಾಯಿತು. 
  • ಲೋಕಸಭಾ ಮತ್ತು ವಿಧಾನಸಭಾಗಳ ಅವಧಿಯನ್ನು 6 ವರ್ಷಗಳಿಂದ 5ವರ್ಷಕ್ಕೆ ಇಳಿಸಲಾಯಿತು. 
  •  ಸಚಿವ ಸಂಪುಟದ ಸಲಹೆಯನ್ನು ಮರು ಪರಿಶೀಲನೆಗಾಗಿ ಕಳಿಸುವ ಅಧಿಕಾರವನ್ನು ರಾಷ್ಟ್ರಪತಿಯವರಿಗೆ ಮರಳಿ ನೀಡಲಾಯಿತು. 
  •  ಆಂತರಿಕ ದಂಗೆ ಎಂಬ ಪದವನ್ನು ತೆಗೆದುಹಾಕಿ ಸಶಸ್ತ್ರ ಬಂಡಾಯ ಎಂಬ ಪದವನ್ನು ಸೇರಿಸಲಾಯಿತು. 
  •  20 ಮತ್ತು 21 ನೇ ವಿಧಿಗಳಲ್ಲಿ ಕಂಡುಬರುವ ಮೂಲಭೂತ ಹಕ್ಕುಗಳನ್ನು ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ರದ್ದುಗೊಳಿಸದಂತೆ  ಮಾಡಲಾಯಿತು. 
  •  ಸಚಿವ ಸಂಪುಟದಲ್ಲಿ ಲಿಖಿತ  ಸಲಹೆ ಅಥವಾ ಶಿಫಾರಸಿನ ಮೇರೆಗೆ ಮಾತ್ರ ರಾಷ್ಟ್ರಪತಿಗಳು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವುದನ್ನು  ಕಡ್ಡಾಯಗೊಳಿಸಲಾಯಿತು. 
  • ರಾಷ್ಟ್ರಪತಿ, ಉಪ ರಾಷ್ಟ್ರಪತಿ ಪ್ರಧಾನಮಂತ್ರಿ ಮತ್ತು ಲೋಕಸಭಾಧ್ಯಕ್ಷರು ಚುನಾವಣೆಗಳಿಗೆ ಸಂಬಂಧಿಸಿದಂತೆ ವಿವಾದಗಳನ್ನು ವಿದ್ಯಾರ್ಥ ಪಡಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲಾಯಿತು. 
  •  ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಶೇಷ ಕಾನೂನು ರೂಪಿಸುವ ಅಧಿಕಾರವನ್ನು ಸಂಸತ್ತಿನಿಂದ ರದ್ದುಪಡಿಸಲಾಯಿತು.

52 ನೇ ತಿದ್ದುಪಡಿ :- 52 ನೇ ತಿದ್ದುಪಡಿಯು 1985 ರಲ್ಲಿ  ರಾಜೀವ್ ಗಾಂಧಿಯವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ತಿದ್ದುಪಡಿ ತಂದು ಪ್ರಮುಖ ವಿಷಯಗಳಾದ ಪಕ್ಷಾಂತರ ನಿಷೇಧ ಕಾಯ್ದೆ  ಮತ್ತು ಸಂವಿಧಾನಕ್ಕೆ 10 ನೇ ಅನುಸೂಚಿಯನ್ನು ಸೇರ್ಪಡೆ ಮಾಡಲಾಯಿತು. 

61 ನೇ ತಿದ್ದುಪಡಿ :- ರಾಜೀವ್ ಗಾಂಧಿ ಅವರು ಪ್ರಧಾನಿಗಳಾದ ಸಂದರ್ಭದಲ್ಲಿ 1988 ರಲ್ಲಿ 61 ನೇ ತಿದ್ದುಪಡಿ ಮಾಡಿ 1989 ರಿಂದ ಜಾರಿ ಬರುವಂತೆ  ಮತದಾನದ ವಯಸ್ಸನ್ನು 21 ರಿಂದ 18 ವರ್ಷ ಕ್ಕೆ ಇಳಿಸಲಾಯಿತು.
ರಾಜೀವ್ ಗಾಂಧಿ 

73 ನೇ ತಿದ್ದುಪಡಿ :- ಈ ತಿದ್ದುಪಡಿಯ ಮೂಲಕ ಆಡಳಿತದ ವಿಕೇಂದ್ರೀಕರಣ ಮಾಡಿ ಸ್ಥಳೀಯ ಸರ್ಕಾರಗಳ ಸ್ಥಾಪನೆಗೆ ಅವಕಾಶವನ್ನು  ಮಾಡಿಕೊಡಲಾಯಿತು. ಈ ತಿದ್ದುಪಡಿಯಂತೆ 1993 ಏಪ್ರಿಲ್ 24 ರಂದು ಮೊದಲ ಗ್ರಾಮ ಪಂಚಾಯತಿ ಸ್ಥಾಪನೆಯಾಯಿತು ಹಾಗೂ  ಸಂವಿಧಾನಕ್ಕೆ 11ನೇ ಅನುಸೂಚಿಯನ್ನು  ಸೇರ್ಪಡೆ ಮಾಡಲಾಯಿತು. 

74 ನೇ ತಿದ್ದುಪಡಿ :- ಈ ತಿದ್ದುಪಡಿಯು ನಗರ ಸ್ಥಳೀಯ ಸರ್ಕಾರಗಳ ಸ್ಥಾಪನೆ ಮಾಡಲು ಅವಕಾಶ ನೀಡಲಾಯಿತು ಮತ್ತು  ಸಂವಿಧಾನಕ್ಕೆ 12 ನೇ ಅನುಸೂಚಿಯನ್ನು  ಸೇರಿಸಲಾಯಿತು. 

86 ನೇ ತಿದ್ದುಪಡಿ :- 2002 ರಲ್ಲಿ ಈ ತಿದ್ದುಪಡಿ ಗೆ ಸಂವಿಧಾನದ 4A ಭಾಗಕ್ಕೆ 51A ವಿಧಿ ಗೆ 11ನೇ ಮೂಲಭೂತ ಕರ್ತವ್ಯವನ್ನು ಸೇರ್ಪಡೆ ಮಾಡಿ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ ಎಂಬುದನ್ನು ಸೇರಿಸಲಾಯಿತು. 

89 ನೇ ತಿದ್ದುಪಡಿ :- 2003ರಲ್ಲಿ ಸಂವಿಧಾನದ 338 ನೇ ವಿಧಿಯಲ್ಲಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಯೋಗವನ್ನು,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಆಯೋಗಗಳು ಎಂದು ಪ್ರತ್ಯೇಕ ಅಯೋಗಗಳನ್ನು ಸ್ಥಾಪನೆ ಮಾಡಲಾಯಿತು. ಈ  ತಿದ್ದುಪಡಿಯಂತೆ 338 ನೇ ವಿಧಿ ಪ್ರಕಾರ ಪರಿಶಿಷ್ಟ ಜಾತಿ ಆಯೋಗ ಮತ್ತು 338A ವಿಧಿ ಪ್ರಕಾರ ಪರಿಶಿಷ್ಟ ಪಂಗಡ ಆಯೋಗವನ್ನು ಸ್ಥಾಪನೆ ಮಾಡಲಾಯಿತು.

91 ನೇ ತಿದ್ದುಪಡಿ :- 2003 ರಲ್ಲಿ ಸಂವಿಧಾನಕ್ಕೆ 91ನೇ ತಿದ್ದುಪಡಿ ಮಾಡುವುದರ ಮೂಲಕ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸಚಿವ ಸಂಪುಟದ ಗಾತ್ರ ಒಟ್ಟು ಸದಸ್ಯರ ಶೇ 15 ರಷ್ಟು ಮೀರಬಾರದು ಎಂದು ಮಿತಿಯನ್ನು ಹಾಕಲಾಯಿತು. 

95 ನೇ ತಿದ್ದುಪಡಿ :- 2009ರಲ್ಲಿ 95 ನೇ ತಿದ್ದುಪಡಿಯ  ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಇದ್ದ ಮೀಸಲಾತಿಯನ್ನು 10 ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. 25 ಜನವರಿ  2020  ಯಿಂದ 2030 ಜನವರಿ 25 ತನಕ ಜಾರಿ ಬರುವಂತೆ ಮಾಡಲಾಯಿತು. 

96 ನೇ ತಿದ್ದುಪಡಿ :- 2011ರಲ್ಲಿ 96ನೇ ತಿದ್ದುಪಡಿಯ ಮೂಲಕ ಸಂವಿಧಾನದ 8 ನೇ  ಅನುಸೂಚಿಯಲ್ಲಿದ್ದ ಒಡಿಯ ಭಾಷೆಯನ್ನು ಒರಿಯಾ ಎಂದು ಬದಲಾವಣೆ ಮಾಡಲಾಯಿತು. 

97 ನೇ ತಿದ್ದುಪಡಿ :- 97ನೇ ತಿದ್ದುಪಡಿಯಿಂದ 2011ರಲ್ಲಿ  ಸಂವಿಧಾನದ 9ನೇ ಭಾಗಕ್ಕೆ ಹೊಸದಾಗಿ ಭಾಗ 9B ಭಾಗವನ್ನು ಸೇರ್ಪಡೆ ಮಾಡಲಾಯಿತು. ಈ ಭಾಗವು ಸಹಕಾರ ಸಂಘಗಳ ಸ್ಥಾಪನೆ ಬಗ್ಗೆ ತಿಳಿಸುತ್ತದೆ. 

98 ನೇ ತಿದ್ದುಪಡಿ :- 2013ರಲ್ಲಿ 98 ನೇ ತಿದ್ದುಪಡಿಯ ಮೂಲಕ ವಿಶೇಷವಾಗಿ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದೂಳಿದ ಜಿಲ್ಲೆಗಳು ಆದ ಬೀದರ್ ಕಲ್ಬುರ್ಗಿ ಯಾದಗಿರಿ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಿಗೆ ವಿಶೇಷ  ಸ್ಥಾನಮಾನ ಆದ 371ಜೆ ಮೀಸಲಾತಿಯನ್ನು  ನೀಡಲಾಯಿತು. 
 
ಕಲ್ಯಾಣ ಕರ್ನಾಟಕ 


99 ನೇ ತಿದ್ದುಪಡಿ :- ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸ್ಥಾಪನೆ ಮಾಡಿ ಮತ್ತೆ  ರದ್ದು ಮಾಡಲಾಗಿದೆ.

100 ನೇ  ತಿದ್ದುಪಡಿ :- ಭಾರತ ಮತ್ತು ಬಾಂಗ್ಲಾದೇಶ ರಾಷ್ಟ್ರಗಳ ನಡುವಿನ ಗಡಿಗಳ ವಿನಿಮಯ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದೆ. 

101 ನೇ ತಿದ್ದುಪಡಿ :- GST  ತೆರಿಗೆಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ 122 ನ್ನು  2016ರಲ್ಲಿ ಮಂಡನೆ ಮಾಡಿ 2017 ಜುಲೈ 1 ರಿಂದ ಜಾರಿಗೆ ಮಾಡಲಾಗಿದೆ.

Goods and Service Tax 
102 ನೇ ತಿದ್ದುಪಡಿ :- ಶಾಸನಾತ್ಮಕ ಸಂಸ್ಥೆಯಾಗಿದ್ದ  ಹಿಂದುಳಿದ ವರ್ಗಗಳ ಆಯೋಗವನ್ನು ಸಂವಿಧಾನಾತ್ಮಕ ಸ್ಥಾನಮಾನ ನೀಡಿ ಸಂವಿಧಾನದ 338B ವಿಧಿಯಲ್ಲಿ ಸೇರ್ಪಡೆ ಮಾಡಲಾಯಿತು. 

103 ನೇ ತಿದ್ದುಪಡಿ :- ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇಕಡ 10 ರಷ್ಟು  ಮೀಸಲಾತಿ ನೀಡುವುದಕ್ಕೆ ತಿದ್ದುಪಡಿ ಮಾಡಲಾಯಿತು. ಶಿಕ್ಷಣದಲ್ಲಿ  ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಲಾಗಿದೆ. 

104 ನೇ  ತಿದ್ದುಪಡಿ :- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿಯನ್ನು 10 ವರ್ಷಗಳಿಗೆ ಹೆಚ್ಚಿಸಲಾಯಿತು. ಇದು ಜನವರಿ 25  2020 ರಿಂದ ಜನವರಿ 25  2030  ಸ್ವತಂತ್ರ ಬಂದು 80 ವರ್ಷಗಳ ತನಕ ಜಾರಿ ಬರುವಂತೆ ಮಾಡಲಾಯಿತು. 

ಸೂಚನೆ : - ಪರೀಕ್ಷೆಗಳಲ್ಲಿ ಕೇಳುವ ಸಂಭವ ಇರುವಂತ  ಸಂವಿಧಾನದ ಮಹತ್ವದ ತಿದ್ದುಪಡಿಗಳನ್ನು ಮಾತ್ರ  ನೀಡಲಾಗಿದೆ. 
      

ಕೃಷ್ಣ ನಾಯಕ್ ಸಿರಿಗೇರಿ...... 




Post a Comment

1 Comments

Happy Friendship Day...... My Dear Friends.. !