ಸಾಮಾನ್ಯ ವಿಜ್ಞಾನ ವಿಷಯದ ಪ್ರಮುಖ ಅಂಶಗಳು ಭಾಗ-1



ವಾಯುವಿನಲ್ಲಿರುವ ಅಣುಗಳು ಮತ್ತು ಧೂಳಿನ ಕಣಗಳು ಸೂರ್ಯನ ಬಣ್ಣಗಳಲ್ಲಿನ ನೀಲಿ ಬಣ್ಣವನ್ನು ಹೆಚ್ಚಾಗಿ ಚದುರಿಸುವುದರಿಂದ ಆಕಾಶವು ನೀಲಿಯಾಗಿ ಕಾಣುತ್ತದೆ. 

ಸುನಾಮಿಯು ಸಮುದ್ರದಾಳದಲ್ಲಿ ಉಂಟಾಗುತ್ತದೆ. ಸಮುದ್ರ ಇರುವ ಸ್ಥಳಗಳಲ್ಲಿ ನಿರ್ಗಲ್ಲುಗಳ ಮೇಲೆ ಒತ್ತಡವುಂಟಾಗಿ ಭೂಕಂಪವುಂಟಾಗುತ್ತದೆ. ಇದರಿಂದ ಸುನಾಮಿಯಂತ ವಿಕೋಪಗಳು ಉಂಟಾಗುತ್ತವೆ. ಸುನಾಮಿ ಎಂಬ ಪದವು ಜಪಾನ್ ಭಾಷೆಯ ಪದವಾಗಿದ್ದು ಅದರ ಅರ್ಥ ಅಬ್ಬರದ ಅಲೆ ಎಂದಾಗಿದೆ. 

ಬ್ರೆಡ್ ತಯಾರಿಸಲು ಈಸ್ಟ್ ಎಂಬ ಶಿಲಿಂಧ್ರ ಬಳಕೆ ಮಾಡುವುದರಿಂದ ಬ್ರೆಡ್ ಮೃದುವಾಗಿ ಉಬ್ಬುತ್ತದೆ. 

ಬದನೆಯ ಅನುವಂಶಿಕ ತಳಿಯಾದ ಬಿ. ಟಿ ತಳಿಯನ್ನು ಕೀಟ ನಿರೋಧಕ ಮಾಡಲು ಅಭಿರುದ್ದಿ ಪಡಿಸಲಾಗಿದೆ. ಬಿ. ಟಿ ಯ ವಿಸ್ತೃತ ರೂಪ ಬ್ಯಾಸಿಲಸ್ ಥುರಾಂಜಿಸ್ ಎಂದರ್ಥ. ಇದೊಂದು ಬ್ಯಾಕ್ಟೇರಿಯಾ ಆಗಿದೆ. 

ವಿದ್ಯುತ್ ಬಲ್ಬ್ ನಲ್ಲಿ ಫಿಲಮೆಂಟ್ ಆದ ಟಂಗ್ ಸ್ಟನ್ ನ್ನು ಥಾಮಸ್ ಅಲ್ವಾ ಎಡಿಸನ್ ಕಂಡು ಹಿಡಿದನು. ವಿದ್ಯುತ್ ಬಲ್ಬ್ ಗಳಲ್ಲಿ ಸಾರಜನಕವನ್ನು ಬಳಸುತ್ತಾರೆ .

ರೇಷ್ಮೆ, ಸೆಣಬು ಮತ್ತು ನಾರುಗಳು ಸ್ವಾಭಾವಿಕ ಫೈಬರ್ ಆಗಿದ್ದು, ರೇಯಾನ್ ಮಾತ್ರ ಸ್ವಾಭಾವಿಕ ಫೈಬರ್ ಅಲ್ಲ. 

ಸಾಮಾನ್ಯ ವಯಸ್ಕ ಮಾನವನ ಹೃದಯ ಬಡಿತವು ಪ್ರತಿ ನಿಮಿಷಕ್ಕೆ 72 ರಿಂದ 80ಬಾರಿ ಬಡಿದುಕೊಳ್ಳುತ್ತದೆ. ನವಜಾತ ಶಿಶುವಿನ ಹೃದಯ ಬಡಿತವು 110 ರಿಂದ 120 ಬಾರಿ, ಹಮಿಂಗ್ ಬರ್ಡ್ ಪಕ್ಷಿಯ ಹೃದಯ ಬಡಿತವು 1260ಬಾರಿ, ತಿಮಿಂಗಲ ಹೃದಯ ಬಡಿತವು 20ಬಾರಿ, ಆನೆಯ ಹೃದಯ 30ಬಾರಿ ಬಡೆದುಕೊಳ್ಳುತ್ತದೆ. 

ಇನ್ಫ್ರಾರೆಡ್ ಕಿರಣಗಳ ಸಹಾಯದಿಂದ ಟಿ.ವಿ ಯ ರಿಮೋಟ್ ಗಳು ಕಾರ್ಯನಿರ್ವಹಿಸುತ್ತವೆ. 

ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ಹುಣಸೆ ಹಣ್ಣಿನಲ್ಲಿ ಟಾರ್ಟಾರಿಕ ಆಮ್ಲವಿರುತ್ತದೆ. ಟೋಮೋಟ್ ಹಣ್ಣಿನಲ್ಲಿ ಆಕ್ಸಲಿಕ್ ಆಮ್ಲವಿರುತ್ತದೆ. ದುರ್ಬಲ ಅಸಿಟಿಕ್ ಆಮ್ಲವನ್ನು ವಿನೆಗರ್ ಎಂದು ಕರೆಯುತ್ತಾರೆ. 

ಅಲ್ಟಿಮೀಟರ್ ನ್ನು ಎತ್ತರವನ್ನು ಅಳೆಯಲು ಬಳಸುತ್ತಾರೆ. ವಿದ್ಯುತ್ ಪ್ರವಾಹವನ್ನು ಅಳೆಯಲು ಅಮ್ಮೀಟರ್ ನ್ನು ಬಳಸುತ್ತಾರೆ.

ಸಿಫಿಲಿಸ್, ಗೊನೆರಿಯ, ಏಡ್ಸ್ ರೋಗಗಳು ಲೈಂಗಿಕವಾಗಿ ಹರಡುವ ರೋಗಗಳು ಆಗಿವೆ. 

ಸಸ್ಯಗಳಿಗೆ ನೀರಿನ ಸಾಗಾಣಿಕೆ ಮಾಡುವುದು ಕೈಲಂ ಅಂಗಾಂಶ ಎಂದು ಕರೆ
ಯುತ್ತಾರೆ. ಆಹಾರವನ್ನು ಸರಬರಾಜು ಮಾಡುವುದನ್ನು ಫ್ಲೋಯಂ ಅಂಗಾಂಶ ಎಂದು ಕರೆಯುತ್ತಾರೆ.  ಎಪಿಡರ್ಮಿಸ್ ಎಂಬುದು ಸಸ್ಯದ ಹೊರಭಾಗದಲ್ಲಿರುವ ಅಂಗಾಂಶವಾಗಿದೆ. 

ಇಂಗಾಲದ ಬಹುರೂಪಗಳು, ಕಲ್ಲಿದ್ದಲು, ಗ್ರಾಫೈಟ್, ವಜ್ರ. ಇಂಗಾಲದ ಕಠಿಣವಾದ ಬಹುರೂಪಾ ವಜ್ರವಾಗಿದೆ. ವಜ್ರದ ಕಠಿಣತೆಯನ್ನು ಕ್ಯಾರೆಟ್ ನಲ್ಲಿ ಹೇಳಾಗುತ್ತದೆ.

ಒತ್ತಡವನ್ನು ಪ್ಯಾಸ್ಕಲ್ ಎಂಬ ಮಾನದಿಂದ ಅಳೆಯುತ್ತಾರೆ. ಒತ್ತಡವನ್ನು ಅಳೆಯುವಂತ ಉಪಕರಣ ಬಾರೋ ಮೀಟರ್. ಪ್ಯಾಸ್ಕಲ್ ಎಂಬ ಫ್ರೆಂಚ್ ವಿಜ್ಞಾನಿಯ ಹೆಸರು ಇಡಲಾಗಿದೆ. ಬರೋಮೀಟರ್ ನ್ನು ಇವಾಂಗೇಲಿಸ್ಟ್ ಟಾರಿಸೆಲ್ಲಿ ಎಂಬ ಇಟಲಿ ವಿಜ್ಞಾನಿ ಕಂಡುಹಿಡಿದನು. 

ಶರೀರದಲ್ಲಿ ಜೀವಸತ್ವ ಕೆ ತಯಾರಾಗುತ್ತದೆ. ವಿಟಮಿನ್-ಎ ಕಣ್ಣಿನ ರೆಟಿನಾ ಕ್ಕೆ  ಆವಶ್ಯಕವಾದ ಜೀವಸತ್ವವಾಗಿದೆ. ವಿಟಮಿನ್ ಎ  ಕೊರತೆಯಿಂದ ಇರುಳು ಕುರುಡುತನ ಬರುತ್ತದೆ. ವಿಟಮಿನ್ ಸಿ  ಕೊರತೆಯಿಂದ ಸ್ಕರ್ವಿ ರೋಗ ಬರುತ್ತದೆ. ವಿಟಮಿನ್ ಬಿ ಕೊರತೆಯಿಂದ   ಬೆರಿಬೆರಿ ರೋಗ ಬರುತ್ತದೆ.  ವಿಟಮಿನ್ ಡಿ ಕೊರತೆಯಿಂದ ರಿಕೆಟ್ಸ್ ಬರುತ್ತದೆ. ವಿಟಮಿನ್ ಬಿ12 ಕೊರತೆಯಿಂದ ಹಿಮೋಫೀಲಿಯಾ ರೋಗ ಬರುತ್ತದೆ. 

ಹಿಮೋಫೀಲಿಯಾ ಎಂಬ ರೋಗ ಬರುವುದರಿಂದ ಮಾನವನ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದಿಲ್ಲ. ಈ ರೋಗವು ಬ್ರಿಟನ್ ರಾಣಿ ವಿಕ್ಟೋರಿಯಾ ಗೆ ಬಂದಿದ್ದರಿಂದ ಇದನ್ನ ರಾಯಲ್ ಕಾಯಿಲೆ ಎಂದು ಕರೆಯುತ್ತಾರೆ. ಈ ರೋಗ ನಿವಾರಣೆಗೆ ವಿಟಮಿನ್ ಕೆ ಅಗತ್ಯವಾಗಿದೆ ರಕ್ತದಲ್ಲಿರುವ ಕಿರುತಟ್ಟೆಗಳಿರುವ ಥಾಮ್ಬೋಪ್ಲಾಸ್ಟಿನ್ ಎಂಬ ಪ್ರೊಟೀನ್ ರಕ್ತ ಹೆಪ್ಪುಗಟ್ಟಲು ಸಹಕಾರಿಯಾಗಿದೆ. 

ಫಂಗಸ್ ಗಳಿಂದ (ಶಿಲಿಂಧ್ರ) ಥೆಟ್ಲಿಕ್ ಫೂಟ್ ಎಂಬ ಕಾಯಿಲೆ ಬರುತ್ತದೆ. ಶಿಲಿಂಧ್ರ ಗಳು ತುರಿಕೆ, ಕಜ್ಜಿ ಯಂತಹ ರೋಗಗಳನ್ನು ಉಂಟು ಮಾಡುತ್ತವೆ. ಪೆನ್ಸಿಲಿನ್ ಎಂಬ ಔಷದಿ ಯನ್ನು ಪೆನ್ಸಿಲಿನ್ ನೋಟೇಟೆಮ್ ಎಂಬ ಶಿಲಿಂಧ್ರ ದಿಂದ ತಯಾರಿಸುತ್ತಾರೆ. ಪೆನ್ಸಿಲಿನ್ ಔಷಧಿಯನ್ನು ಸ್ಕಾಟಿಷ್ ವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ ಅವರು 1928ರಲ್ಲಿ ಕಂಡುಹಿಡಿದರು. 

ವಾತಾವರುಣದಲ್ಲಿರುವ ನೈಟ್ರಸ್ ಆಕ್ಸೈಡ್ ಮತ್ತು ಸುಲ್ಪ್ಯೂರಿಕ್ ಡೈಆಕ್ಸೈಡ್ ನೊಂದಿಗೆ ಮಳೆ ನೀರು ಸೇರಿದಾಗ ಆಮ್ಲ ಮಳೆ ಉಂಟಾಗುತ್ತದೆ. ಆಮ್ಲ ಮಳೆಯ ph ಮೌಲ್ಯ ವು 5.6 ರಿಂದ 6.5 ರಷ್ಟಿರುತ್ತದೆ. 

ಪ್ರಕೋಸ್ಟ್ ಎಂಬ ಅಂಶವು ಜೇನುತುಪ್ಪ, ತರಕಾರಿ, ಹಣ್ಣುಗಳಲ್ಲಿ ಕಂಡು ಬರುತ್ತದೆ. ಪ್ರಕೋಸ್ಟ್ ನ್ನು ಲೆವಿಲೋಸ್ ಎಂತಲೂ ಕರೆಯುತ್ತಾರೆ.  ಪ್ರಕೋಸ್ಟ್ ಅತ್ಯಂತ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋಹೈಡ್ರೇಟ್ ಆಗಿದೆ.  ಹಣ್ಣುಗಳಲ್ಲಿ ಪ್ರಕ್ರೋಸ್ಟ್ ಇರುತ್ತದೆ. ಇದು ಸಕ್ಕರೆಗಿಂತ ಅಧಿಕ ಸಿಹಿ ಅಂಶವನ್ನು ಹೊಂದಿದೆ. ಗ್ಲುಕೋಸ್ ನ್ನು ಬ್ಲಡ್ ಶುಗರ್ /ಡೆಕ್ಟ್ರೋಸ್ ಎಂದು ಕರೆಯುತ್ತಾರೆ.  ಮಾಲ್ಟೋಸ್ ಬಾರ್ಲಿಯಲ್ಲಿ ಇರುತ್ತದೆ. ಸುಕ್ರೋಸ್ ಎಂಬ ಡೈಸಾಕ್ರೈಡ್  ಕಬ್ಬಿನಲ್ಲಿ ಇರುತ್ತದೆ. ಸಕ್ಕರೆಯನ್ನು ಸುಕ್ರೋಸ್ ಎಂದು ಕರೆಯುತ್ತಾರೆ. ಸುಕ್ರೋಸ್ ನಲ್ಲಿ ಗ್ಲುಕೋಸ್ ಮತ್ತು ಪ್ರಕೋಸ್ಟ್ ಎಂಬ ಮನೋಸ್ಯಾಕರೈಡ್ ಇರುತ್ತದೆ. 

ಮಾನವನ ದೇಹದ ಅತೀ ಉದ್ದವಾದ ಮೂಳೆ ಫೀಮರ್. ಅತೀ ಚಿಕ್ಕ ಮೂಳೆ ಮಧ್ಯಕಿವಿಯಲ್ಲಿರುವ ಸ್ಟೆಪಿಸ್. 

ಮಾನವನ ದೇಹದ ಅತೀ ದೊಡ್ಡ ಅಂಗ ಚರ್ಮ. ಮಾನವನ ದೇಹದ ಅತೀ ದೊಡ್ಡ ಗ್ರಂಥಿ ಯಕೃತ್. ಅತ್ಯಂತ ಚಿಕ್ಕ ಗ್ರಂಥಿ ಪಿಟ್ಯುಟರಿ ಗ್ರಂಥಿ. 

ಮಾನವನ ದೇಹದ ದೊಡ್ಡ ಸ್ನಾಯು ಗ್ಲುಟಿಯಸ್ ಮ್ಯಾಕ್ಸಿಮಸ್. 

ಮಾನವನ ದೇಹದ ಅತೀಯಾದ ಗಟ್ಟಿಯಾದ ಭಾಗ ಹಲ್ಲಿನಲ್ಲಿರುವ ಎನಾಮಲ್. 

ಗಾಳಿಯಲ್ಲಿ ಬೆಳಕು ಅತ್ಯಂತ ವೇಗವಾಗಿ ಚಲಿಸುತ್ತದೆ. ಸಾಂದ್ರತೆ ಹೆಚ್ಚದಂತೆ ಬೆಳಕಿನ ವೇಗವು ಕಡಿಮೆ ಆಗುತ್ತದೆ. ನಿರ್ವಾತದಲ್ಲಿ ಬೆಳಕಿನ ವೇಗವು ಅಧಿಕವಾಗಿರುತ್ತದೆ. ಬೆಳಕು ಒಂದು ಸೆಕೆಂಡ್ ಗೆ ಮೂರು ಲಕ್ಷ km ವೇಗದಲ್ಲಿ ಚಲಿಸುತ್ತದೆ. 

ಗ್ಲುಕೋಮಾ ಎಂಬ ರೋಗವು ಕಣ್ಣಿನ ದೃಷ್ಟಿಗೆ ಸಂಬಂದಿಸಿದ ಕಾಯಿಲೆಯಾಗಿದೆ. ಈ ರೋಗವು ಕಣ್ಣಿನ ರೇಟಿನ ಭಾಗಕ್ಕೆ ತಗುಲುತ್ತದೆ. ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಇರುಳುಗುರುಡುತನ ರೋಗ ಬರುತ್ತದೆ. 

ವಾಯುವಿನ ಒತ್ತಡವನ್ನು ಬರೋಮೀಟರ್ ನಿಂದ ಅಳೆಯುತ್ತಾರೆ. 

ಹೈಗ್ರೋಮೀಟರ್ ನಿಂದ ವಾಯುವಿನ ತೇವಾಂಶವನ್ನು ಅಳೆಯುತ್ತಾರೆ. 

ಅನಿಮೋಮೀಟರ್ ನಿಂದ ಗಾಳಿಯ ವೇಗವನ್ನು ಅಳೆಯುತ್ತಾರೆ. 

ಸಿಸ್ಮೋಗ್ರಾಫ್ ನಿಂದ ಭೂಕಂಪನವನ್ನು ಅಳೆಯುತ್ತಾರೆ. 

ಲ್ಯಾಕ್ಟೋಮೀಟರ್ನಿಂದ ಹಾಲಿನ ಸಾಂದ್ರತೆಯನ್ನು ಅಳೆಯುತ್ತಾರೆ. 

ಮ್ಯಾನೋ ಮೀಟರ್ ಒತ್ತಡ ಮತ್ತು ನಿರ್ವಾತವನ್ನು ಅಳೆಯುವ ಮಾಪಕವಾಗಿದೆ. 

ಚಾರ್ಲ್ಸ್ ಡಾರ್ವಿನ್ ಅವರು 1859 ರಲ್ಲಿ ಒರಿಜಿನ್ ಆಫ್ ಸ್ಪೀಸೀಸ್ (ಪ್ರಬೇಧಗಳ ಉಗಮ)ಎಂಬ ಗ್ರಂಥ ವನ್ನು ಬರೆದಿದ್ದಾರೆ. ಇದು ಜೀವಿಗಳ ಉಗಮದ ಬಗ್ಗೆ ತಿಳಿಸುತ್ತದೆ.  

ದಿನನಿತ್ಯ ಸಾಂಬಾರು ಪದಾರ್ಥಗಳಲ್ಲೊಂದಾದ ಲವಂಗವೂ ಆ ಸಸ್ಯದ ಮೊಗ್ಗು ಭಾಗವಾಗಿದೆ. 

ವಾಟ್ಸನ್ ಮತ್ತು ಕ್ರಿಕ್ ರವರು DNA ಸಂರಚನೆಯನ್ನು 1953ರಲ್ಲಿ ಪತ್ತೆ ಹಚ್ಚಿದರಿಂದ 1962ರಲ್ಲಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 

ದ್ಯುತಿ ತಂತಿಗಳು (ಆಪ್ಟಿಕಲ್ ಫೈಬರ್ )ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತವೆ. ಆಪ್ಟಿಕಲ್ ಫೈಬರ್ಸ್ ಗಳನ್ನು ದೂರ ಸಂಪರ್ಕ ಕ್ಷೇತ್ರಗಳಲ್ಲಿ ಬಳಕೆ ಮಾಡಲಾಗುತ್ತದೆ. 

ಎಲೆಕ್ಟ್ರಿಕ್ ಬಲ್ಬ್ ಗಳಲ್ಲಿ ನೈಟ್ರೋಜೆನ್  ನ್ನು ತುಂಬುತ್ತಾರೆ. ಈ ಅನಿಲವು ರಾಸಾಯನಿಕವಾಗಿ ವರ್ತಿಸುವುದಿಲ್ಲ ಮತ್ತು ಉರಿಯುವುದಿಲ್ಲ. ಆದರೆ ಜಲಜನಕ ದಹ್ಯ ವಸ್ತುವಾಗಿದೆ ಆಮ್ಲಜನಕ ದಹನಕೂಲಿ ಯಾಗಿರುವುದರಿಂದ ಇವುಗಳನ್ನ ಬಳೆಸುವುದಿಲ್ಲ. 

ಕ್ಲೋರೋಫಿಲ್ ನ ಮದ್ಯ ಭಾಗದಲ್ಲಿ ಮೆಗ್ನಿಶಿಯಂ ಲೋಹವಿರುತ್ತದೆ.  ಕ್ಲೋರೋಫಿಲ್ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಸಹಕಾರಿಯಾಗುವ ವರ್ಣಕವಾಗಿದೆ. ಇದು ಎಲೆಯ ಭಾಗದಲ್ಲಿ ಕಂಡು ಬರುತ್ತದೆ. ಮೂಳೆಗಳಲ್ಲಿ ಕ್ಯಾಲ್ಸಿಯಮ್ ಮತ್ತು ಪಾಸ್ಪರಸ್ (ರಂಜಕ) ಕಂಡು ಬರುತ್ತದೆ. 

ವಾಸಿಂಗ್ ಸೋಡದ ರಾಸಾಯನಿಕ ಹೆಸರು ಸೋಡಿಯಂ ಕಾರ್ಬೊನೇಟ್ ಆಗಿದೆ.ಇದನ್ನು ಬಟ್ಟೆ ಒಗೆಯಲು ಬಳಕೆ ಮಾಡುತ್ತಾರೆ. 

ಸೋಡಿಯಂ ಬೈ ಕಾರ್ಬೋನೇಟ್  ನ್ನು ಅಡುಗೆ ಸೋಡ ಎಂದು ಕರೆಯುತ್ತಾರೆ. ಅಡುಗೆ ಸೋಡಾವನ್ನು ಬೇಕರಿಗಳಲ್ಲಿ ಬ್ರೆಡ್, ಬನ್ ತಯಾರಿಸಲು ಇಡ್ಲಿ ತಯಾರಿಸಲು ಬಳಸುತ್ತಾರೆ.

ಕ್ಯಾಲ್ಸಿಯಮ್ ಕಾರ್ಬೊನೇಟ್ ನು ಸುಣ್ಣ ಎಂದು ಕರೆಯುತ್ತಾರೆ.  

ಪೆನ್ಸಿಲ್ ನಲ್ಲಿ ಗ್ರಾಫೈಟ್ ನ್ನು ಬಳಕೆ ಮಾಡುತ್ತಾರೆ. ಗ್ರಾಫೈಟ್ ಇಂಗಾಲದ ಬಹುರೂಪವಾಗಿದೆ. ಗ್ರಾಫೈಟ್ ಪದರಗಳ ರೂಪದಲ್ಲಿ ಬೇರ್ಪಡುತ್ತದೆ. ಗ್ರಾಫೈಟ್ ನ್ನು ಶುಷ್ಕ ಕೋಶಗಳಲ್ಲಿ ವಿದ್ಯುತ್ ವಾಹಕವಾಗಿ ಬಳಕೆ ಮಾಡುತ್ತಾರೆ. 

ಸಿಲಿಕನ್ ಕಾರ್ಬೈಡ್ ಸಿಲಿಕಾನ್ ನ್ನು ಇಂಗಾಲದೊಂದಿಗೆ ಕಾಯಿಸಿದಾಗ ಬರುವಂತಹ ಸಂಯುಕ್ತ ವಸ್ತುವಾಗಿದೆ. ಇದು ವಜ್ರದ ನಂತರ 2ನೇ ಕಠಿಣವಾದ ವಸ್ತುವಾಗಿದೆ. 

ಸಿಲಿಕಾನ್ ಕಾರ್ಬೈಡು ನ್ನು ಕಾರ್ಬೊರೆಂಡಮ್ ಎಂದು ಕರೆಯುತ್ತಾರೆ. ಸಾಣೆಕಲ್ಲುಗಳಲ್ಲಿ ಇದನ್ನು ಬಳಕೆ ಮಾಡುತ್ತಾರೆ. ಸಿಲಿಕಾನ್ ಅರೆವಾಹಕವಾಗಿದ್ದು ಇದನ್ನ ಕಂಪ್ಯೂಟರ್ ಗಳಲ್ಲಿ ಇಂಟಿಗ್ರೇಟಡ್ ಚಿಪ್ಸ್ ಆಗಿ ಬಳಕೆ ಮಾಡುತ್ತಾರೆ. 

ಮೂರನೇ ಪೀಳಿಗೆಯಲ್ಲಿ ಕಂಪ್ಯೂಟರ್ ಗಳಲ್ಲಿ ಐಸಿ ಗಳಿಂದ ಮಾಡಲ್ಪಟಿದೆ. 

ಸಿಲಿಕಾನ್ ಭೂಮಿಯಲ್ಲಿ ಹೇರಳವಾಗಿ ದೊರೆಯುವ ಎರಡನೇ ವಸ್ತುವಾಗಿದೆ. 

ಬಲೂನ್ಗಳಲ್ಲಿ ಹೀಲಿಯಂ ನ್ನು ತುಂಬುತ್ತಾರೆ. ಮೊದಲು ಬಲೂನ್, ಪ್ಯಾರಾಚೂಟ್ ಗಳಲ್ಲಿ ಜಲಜನಕವನ್ನು ತುಂಬುತ್ತಾರೆ. ಆದ್ರೆ ಜಲಜನಕ ವು ದಹ್ಯ ವಸ್ತುವಾಗಿದ್ದು, ಒತ್ತಿ ಉರಿಯುವಂತ ಸಾಮರ್ಥ್ಯ ಹೊಂದಿದೆ. ಆದ ಕಾರಣ ಪ್ರಸ್ತುತವಾಗಿ ಹೀಲಿಯಂ ನ್ನು ಜಲಜನಕದ ನಂತರದ ಹಗುರವಾದ ಮೂಲವಸ್ತುವಾಗಿದೆ.

ರೆಫ್ರಜೆರೇಟರ್ ಗಳಲ್ಲಿ ಬಳಸಲಾಗುವ CFC ಯ ಹೆಸರು ಫ್ರೀಯಾನ್ ಆಗಿದೆ. CFC ಯಲ್ಲಿ ಕಾರ್ಬನ್, ಕ್ಲೋರಿನ್ ಮತ್ತು ಪ್ಲೋರಿನ್ ಇರುತ್ತದೆ. 

ಜೀವಸತ್ವಗಳು (ವಿಟಮಿನ್ ಗಳು) ನಮ್ಮ ದೇಹದ ಮೈಕ್ರೋ ನ್ಯೂಟ್ರಿಯಂಟ್ ಗಳು ಆಗಿದಾವೆ. 

ಜಿಪ್ಸಮ್ ಪ್ರಮುಖವಾಗಿ ರಸಗೊಬ್ಬರವನ್ನು ಕ್ಯಾಲ್ಸಿಯಮ್ ಸಲ್ಪೇಟ್ ಹೈಡ್ರೇಟ್ ಎಂದು ಕರೆಯುವರು. 

ಕಬ್ಬಿಣದ ತುಕ್ಕು ಕಬ್ಬಿಣದ ಆಕ್ಸಿಡೀಕರಣದಿಂದ ಉಂಟಾಗುತ್ತದೆ. ಕಬ್ಬಿಣವು ತೇವಾಂಶಭರಿತ ಗಾಳಿಯೊಂದಿಗೆ ವರ್ತಿಸಿದಾಗ ಕಬ್ಬಿಣದ ಜಲೀಯ ಆಕ್ಸೈಡ್ ಉತ್ಪತ್ತಿಯಾಗುತ್ತದೆ. ಇದನ್ನೇ ತುಕ್ಕು ಎಂದು ಕರೆಯುತ್ತೇವೆ. ತುಕ್ಕು ಹಿಡಿದಾಗ ಕಬ್ಬಿಣದ ತೂಕವು ಹೆಚ್ಚಾಗುತ್ತದೆ. ಇದೊಂದು ರಾಸಾಯನಿಕ ಕ್ರಿಯೆ. 

ಏಡ್ಸ್ ಎಂಬುದು HIV ವೈರಸ್ ನಿಂದ ಬರುವ ರೋಗವಾಗಿದೆ. ಇದು ಅಸುರಕ್ಷಿತ ಲೈಂಗಿಕತೆ, ಸಂಸ್ಕರಿಸದ ಸಿರಿಂಜುಗಳ ಬಳಕೆ ಪ್ರಮುಖವಾದ ಕಾರಣವಾಗಿದೆ. ಏಡ್ಸ್ ನ್ನು ಪತ್ತೆ ಹಚ್ಚಲು ಎಲೀಸಾ ಪರೀಕ್ಷೆಯನ್ನು ನಡೆಸಲಾಗುತ್ತದೆ. 

1909ರಲ್ಲಿ ಗುಗ್ಲಿಯೆಲ್ಮೊ ಮಾರ್ಕೋನಿ ಯವರಿಗೆ ರೇಡಿಯೋ ಸಂಶೋಧನೆ ಮಾಡಿದಕ್ಕಾಗಿ ಭೌತಶಾಸ್ತ್ರ ದಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು.  

ಸಮುದ್ರದ ನೀರಿನಲ್ಲಿ ಅತೀ ಹೇರಳವಾಗಿ ಅಯೋಡಿನ್ ದೊರೆಯುತ್ತದೆ. ಕರಾವಳಿ ತೀರದಲ್ಲಿ ವಾಸಿಸುವವರಿಗೆ ಗಳಗಂಡ ರೋಗ ಕಂಡು ಬರುವುದಿಲ್ಲ ಕಾರಣ, ಅಯೋಡಿನ್ ಹೆಚ್ಚಾಗಿರುವುದು. ಅಯೋಡಿನ್ ಕೊರತೆಯಿಂದ ಗಳಗಂಡ ರೋಗ ಬರುತ್ತದೆ. 

ತಂಬಾಕಿನಲ್ಲಿ ‘ನಿಕೋಟಿನ್’ ಎಂಬ ಹಾನಿಕಾರಕ ವಸ್ತುವಿದೆ. ಇದೊಂದು ಆಲ್ಕಲೈಡ್ ಆಗಿದೆ. ಇದು ರಕ್ತದ ಒತ್ತಡವನ್ನು ಹೆಚ್ಚುಸುತ್ತದೆ.


ಕೃಷ್ಣ ನಾಯಕ್ ಸಿರಿಗೇರಿ....

Post a Comment

0 Comments